ಪೆರ್ಲ: ಕಾಟುಕುಕ್ಕೆಯ ಬಾಲಪ್ರಭಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸ0ಘದ ಮಹಾಸಭೆ ಗುರುವಾರ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಶಾಲಾ ಸ0ಚಾಲಕ ಕೆ. ಕೃಷ್ಣ ಭಟ್, ಗ್ರಾಮ ಪಂಚಾಯತಿ ಸದಸ್ಯೆ ಮಲ್ಲಿಕಾ.ಜೆ. ರೈ , ಸವಿತಾ ಆರ್ ಶೆಟ್ಟಿ, ಬಿ ಆರ್ ಸಿ ತರಬೇತುದಾರ ಶಿವರಾಮ ಅರೆಕ್ಕಾಡಿ ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ, ಮಾತೃ ಸ0ಘದ ಅಧ್ಯಕ್ಷೆ ಯಾಗಿ ಹೇಮಾವತಿ ಮುಗೇರು ಅವಿರೋಧವಾಗಿ ಆಯ್ಕೆಯಾದರು. 2018ನೇ ವರ್ಷದ ಯು ಯಸ್ ಯಸ್ ಸ್ಕಾಲರ್‍ಶಿಫ್ ಪಡೆದ ಕಾರ್ತಿಕ್ ಯಸ್ ಅವರನ್ನು ಅಭಿನ0ದಿಸಲಾಯಿತು. ಜಯಪ್ರಕಾಶ್ ಸ್ವಾಗತಿಸಿ, ಪವಿತ್ರ ವ0ದಿಸಿದರು. ಪ್ರದೀಪ್ ಕುಮಾರ್ ನಿರೂಪಿಸಿದರು.


