ಕಾಸರಗೋಡು: ನಕಲಿ ಚಿಟ್ ಫಂಡ್ ವಿರುದ್ಧ ಜನತೆ ಜಾಗ್ರತೆ ಪಾಲಿಸುವಂತೆ ಚಿಟ್ ಫಂಡ್ ಡೆಪ್ಯೂಟಿ ರೆಜಿಸ್ತ್ರಾರ್ ತಿಳಿಸಿದರು.
ಸಾರ್ವಜನಿಕರು ಕೆ.ಎಸ್.ಎಫ್.ಇ. ಹೊರತಾಗಿ ಉಳಿದ ಖಾಸಗಿ ಚಿಟ್ ಫಂಡ್ ಗಳಲ್ಲಿ ಸೇರುವ ಮೊದಲು ಅಂತಹ ಸಂಸ್ಥೆಯ ಬಗ್ಗೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ರೆಜಿಸ್ತ್ರಾರ್ ಕಚೇರಿ ಯಾ ಸಂಬಂಧಪಟ್ಟ ಸಬ್ ರೆಜಿಸ್ತ್ರಾರ್ ಕಚೇರಿಯನ್ನು ಸಂಪರ್ಕಿಸಬೇಕು.
1982ರ ಕೇಂದ್ರ ಚಿಟ್ ಫಂಡ್ ಕಾಯಿದೆ ರಾಜ್ಯದಲ್ಲಿ 2012 ಏಪ್ರಿಲ್ 30ರಿಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಕಾಯಿದೆ ಕುರಿತು ಮುಂಗಡ ಮಂಜೂರಾತಿ ಲಭಿಸಿರುವ ಚಿಟ್ ಫಂಡ್ ಗಳಿಗೆ ಮಾತ್ರ ಕಾನೂನು ರೀತ್ಯಾ ಅನುಮತಿಇದೆ. ಮುಂಗಡ ಮಂಜೂರಾತಿಇಲ್ಲದ ಚಿಟ್ ಫಂಡ್ ಸಂಬಂಧ ಕಿರುಹೊತ್ತಗೆ, ಜಾಹೀರಾತು , ನೋಟೀಸು ಸಹಿತ ದಾಖಲೆಗಳು ಗಮನಕ್ಕೆ ಬಂದಲ್ಲಿ ಕಾಸರಗೋಡು ಜಿಲ್ಲಾ ರೆಜಿಸ್ತ್ರಾರ್, ಸಿವಿಲ್ ಸ್ಟೇಷನ್, ವಿದ್ಯಾನಗರ, ಕಾಸರಗೋಡು-671123. ದೂರವಾಣಿ: 04994-255405, 984653498, ಚಿಟ್ ಫಂಡ್ ಇನ್ಸ್ ಪೆಕ್ಟರ್-9400441085, ಅಥವಾ ಸಬ್ ರೆಜಿಸ್ತ್ರಾರ್ ಕಚೇರಿ ಇವರಿಗೆ ಮಾಹಿತಿ ನೀಡಬೇಕು.

