HEALTH TIPS

ಸೂಪರ್ ಶ್ರೀಮಂತರ ಮೇಲಿನ ತೆರಿಗೆಯಿಂದ ಬಡವರಿಗೆ ನೆರವು: ನಿರ್ಮಲಾ ಸೀತಾರಾಮನ್

             
       ಚೆನ್ನೈ: ಸೂಪರ್ ಶ್ರೀಮಂತರ ಮೇಲೆ ಹೇರಲಾಗಿರುವ ತೆರಿಗೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದು, ಬಡವರಿಗೆ ನೆರವಾಗಲು ಕೈಜೋಡಿಸಬೇಕಾದ ಜವಾಬ್ದಾರಿ ಶ್ರೀಮಂತರಿಗಿದೆ ಎಂದು ಹೇಳಿದ್ದಾರೆ.
     ನಾಗರಥರ್ ವಾಣಿಜ್ಯ ಮಂಡಳಿ ನಿನ್ನೆ ಆಯೋಜಿಸಿದ್ದ, ನಾಗರಥರ್ ಅಂತಾರಾಷ್ಟ್ರೀಯ ವ್ಯಾಪಾರ ಸಮ್ಮೇಳನ ನಾಲ್ಕನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸ್ವತಂತ್ರವಾದ ನಂತರದ 60 ವರ್ಷಗಳನ್ನು ಕೇವಲ ನಮ್ಮ ಹಕ್ಕುಗಳ ಬಗ್ಗೆ ಮಾತನಾಡಲು ವ್ಯಯಿಸಿದ್ದು, ಕರ್ತವನ್ನು ಮರೆಯಲಾಯಿತು ಎಂದು  ಬೇಸರ ವ್ಯಕ್ತಪಡಿಸಿದರು.
    ನಾವು ಹೇಗೆ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆಯೋ, ಹಾಗೆಯೇ ನಮ್ಮ ಕರ್ತವ್ಯದ ಕಡೆಗೂ ಗಮನಹರಿಸಬೇಕು; ಎಂದ ಅವರು, ಬಡ ಜನರು ಕರ್ತವ್ಯನಿರತರಾಗಿದ್ದಾರೆ.  ಹೀಗಾಗಿ ಕೇಂದ್ರ ಸರ್ಕಾರ ಅವರಿಗಾಗಿ ಹಲವು ಯೋಜನೆಗಳನ್ನು ರೂಪಿಸದೆ ಎಂದು ಹೇಳಿದರು.
     ಪ್ರತಿಯೊಂದು ಕಷ್ಟವನ್ನೂ ಬಡವರು ಮಾತ್ರ ಸಹಿಸುವುದೇಕೆ ಎಂಬುದರ ಬಗ್ಗೆ ಚಿಂತನೆ ನಡೆಸಿ, ಬಜೆಟ್ ನಲ್ಲಿ ಸೂಪರ್ ಶ್ರೀಮಂತರ ಮೇಲೆ ತೆರಿಗೆ ಹಾಕಲಾಗಿದೆ ಎಂದರು. ದೇಶದಲ್ಲಿ 5 ಸಾವಿರಕ್ಕೂ ಅಧಿಕ ಜನರು ಸೂಪರ್ ಶ್ರೀಮಂತ ವರ್ಗಕ್ಕೆ ಸೇರುತ್ತಾರೆ. ಬಡವರಿಗೆ ನೆರವು ನೀಡಲು ಸರ್ಕಾರಕ್ಕೆ ಸಹಕಾರ ನೀಡಬೇಕಾದ ಜವಾಬ್ದಾರಿ ಅವರ ಮೇಲಿದೆ. ಇಷ್ಟಕ್ಕೂ ಈ ತೆರಿಗೆ ಹೆದ್ದಾರಿ ದರೋಡಯಲ್ಲ ಅಥವಾ ಅವರ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ನಿರ್ಮಲಾ ಸೀತಾರಾಮನ್, ನವೋದ್ಯಮಕ್ಕೆ ಸಹಕರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
    ಸಂಪತ್ತು ಹಾಗೂ ಉದ್ಯೋಗ ಸೃಷ್ಟಿಗಾಗಿ ಭಾರತೀಯ ಕಾರ್ಪೊರೇಟ್ ಗಳನ್ನು ಶ್ಲಾಘಿಸಿದ ಸಚಿವೆ, ಸರ್ಕಾರವು ಯುವಜನತೆಗೆ ಬ್ಯಾಂಕುಗಳ ಮೂಲಕ ಅಗತ್ಯ ನೆರವು ಒದಗಿಸುತ್ತಿದೆ  ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮುಂಚೂಣಿಯಲ್ಲಿದ್ದು, ಮುಂದಿನ ಪೀಳಿಗೆಯ ಭಾರತೀಯರು ಇತರ ದೇಶಗಳಿಗೆ ಗುರುವಾಗಬಲ್ಲರು ಎಂದು ಭವಿಷ್ಯ ನುಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries