ಉಪ್ಪಳ: ಭ್ರಾಮರಿ ಕಲಾವಿದೆರ್ ಉಪ್ಪಳ ಇದರ ನೂತನ ಕಲಾಕಾಣಿಕೆ, ಲೀಲಾಸ್ ಚಂದ್ರ ನಿರ್ಮಾಣದ, ವಸಂತ ಶೆಟ್ಟಿ ದಡ್ಡದಂಗಡಿ ಸಂಯೋಜಿಸುವ, ಶಶಿಕುಮಾರ್ ಕುಳೂರು ರಚನೆಮಾಡಿದ,ಕುಸಲ್ದಮುತ್ತು ಬಲೇತೆಲಿಪಾಲೆ ಖ್ಯಾತಿಯ ಅರುಣ್ ಚಂದ್ರ ಬಿ.ಸಿ.ರೋಡು ನಿರ್ದೇಶನದ, ಭ್ರಾಮರಿ ಕಲಾವಿದೆರ್ ಉಪ್ಪಳ ಅಭಿನಯಿಸುವ "ಮುರಳಿ ಈ ಪಿರ ಬರೋಲಿ"ನಾಟಕದ ಶುಭ ಮೂಹೂರ್ತ ಸಮಾರಂಭ ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯ ದಿವ್ಯ ಹಸ್ತದಿಂದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಸನ್ನಿಧಿಯಲ್ಲಿ ಶನಿವಾರ ನೆರವೇರಿತು.
ಗಾಯತ್ರಿ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ ಬೆಳ್ಚಪ್ಪಾಡ (ಶ್ರೀಕ್ಷೇತ್ರ ಉದ್ಯಾವರ), ರಾಮಕೃಷ್ಣ ಬೆಳ್ಚಪ್ಪಾಡ, ಸುಂದರ ಬೆಳ್ಚಪ್ಪಾಡ (ಶ್ರೀಕ್ಷೇತ್ರ ಪಟ್ಟತ್ತೂರು), ಕೃಷ್ಣ ಜಿ ಮಂಜೇಶ್ವರ(ಶಾರದಾ ಆಟ್ರ್ಸ್ ಮಾಲಕರು), ಆಶಾಲತ ಪೆಲಪ್ಪಾಡಿ (ಬ್ಲಾಕ್ ಪಂಚಾಯತಿ ಸದಸ್ಯೆ),ದಯಾನಂದ ಮಾಡ (ವೈಷ್ಣವಿ ತಂಡದ ಮಾಲಕರು),ಪುಷ್ಪರಾಜ ಐಲ, ಬಾಲಕೃಷ್ಣ ಭಂಡಾರಿ ದಡ್ಡದಂಗಡಿ, ಜಗದೀಶ್ ಪ್ರತಾಪನಗರ, ವಸಂತ ಭಟ್ ತೊಟ್ಟೆತ್ತೋಡಿ, ನಾರಾಯಣ ನಾಯಕ್ ನಡಿಹಿತ್ಲು, ಕಾರ್ತಿಕ್ ಶೆಟ್ಟಿ ಮಜಿಬೈಲು, ರಮೇಶ್ ಸುವರ್ಣ ಮಜಿಬೈಲು, ಜಯರಾಮ್ ಬಲ್ಲಂಗುಡೇಲು, ಶೇಖರ ಸೊಯಿಪಕಲ್ಲು, ಜಗದೀಶ ಮೂಡಂಬೈಲು, ಭಾಸ್ಕರ ಉಪ್ಪಳ, ಅಶ್ವತ್ ಪೂಜಾರಿ ಲಾಲ್ ಭಾಗ್, ರಾಜಾರಾಮ್ ರಾವ್ ಚಿಗುರುಪಾದೆ, ಲಕುಮಿ ತಂಡದ ತುಳಸೀದಾಸ್ ಮಂಜೇಶ್ವರ, ಸೋಮನಾಥ್ ಮಂಗಲ್ಪಾಡಿ, ದೇವಿ ಪ್ರಸಾದ್ ಶೆಟ್ಟಿ, ಜಯ ಮಣಿಯಂಪಾರೆ, ಕಮಲಾಕ್ಷ ಪಂಜ (ಸೆಲೆಕ್ಷನ್ ಸೆಂಟರ್ ಉಪ್ಪಳ) ,ನಾಟಕ ರಚನೆಗಾರ ಶಶಿಕುಮಾರ್ ಕುಳೂರು, ನಿರ್ದೇಶಕ ಅರುಣ್ ಚಂದ್ರ ಬಿ.ಸಿ.ರೋಡು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು. ಕುಮಾರಿ ಗಾಯತ್ರೀ ಪ್ರಾರ್ಥನೆ ಹಾಡಿದರು. ನಾಟಕ ನಿರ್ಮಾಪಕ ಲೀಲಾಸ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಕೆ.ಕುಲಾಲ್.ಬೇಕೂರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಘ್ನೇಶ್ ಮಾಸ್ತರ್ ವಂದಿಸಿದರು.



