HEALTH TIPS

ನೀರ್ಚಾಲು ಹವ್ಯಕ ವಲಯೋತ್ಸವ ಸಂಪನ್ನ


             ಬದಿಯಡ್ಕ: ಮುಳ್ಳೇರಿಯಾ ಹವ್ಯಕ ಮಂಡಲದ ನೀರ್ಚಾಲು ವಲಯದ ವಲಯೋತ್ಸವವು ವಲಯ ಕಾರ್ಯದರ್ಶಿ ಕಕ್ಕಳ ಗೋಪಾಲಕೃಷ್ಣ ಭಟ್ಟರ  ನಿವಾಸದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.
          ಬೆಳಿಗ್ಗೆ ಶಿವಪೂಜೆ, ಏಕಾದಶರುದ್ರ ಸೇವೆ ಹಾಗೂ ದುರ್ಗಾಪೂಜೆ ನಡೆಯಿತು. ಕುಲಪುರೋಹಿತರಾದ ವೇದಮೂರ್ತಿ ಕಿಳಿಂಗಾರು ಶಂಕರನಾರಾಯಣ ಭಟ್ ಅವರ ಪುತ್ರ ವೇದಮೂರ್ತಿ ಪ್ರಕಾಶ ಭಟ್ ಅವರ ನೇತೃತ್ವದಲ್ಲಿ ದುರ್ಗಾಪೂಜೆ ನಡೆಯಿತು. ವಲಯ ವೈದಿಕ ಪ್ರಧಾನರಾದ ಉದಯಶಂಕರ ಕುಂಟಿಕಾನ ಮಠ ಅವರ ನೇತೃತ್ವದಲ್ಲಿ ಶಿವಪೂಜೆ ಹಾಗೂ ಮಂಡಲ ಸಂಸ್ಕಾರ ಪ್ರಧಾನರಾದ ನವನೀತಪ್ರಿಯ ಕೈಪಂಗಳ ಅವರ ನೇತೃತ್ವದಲ್ಲಿ ಏಕಾದಶರುದ್ರ ಸೇವೆ ಜರಗಿತು ನಡೆಯಿತು. ವಲಯ ಮಾತೃವಿಭಾಗದ ನೇತೃತ್ವದಲ್ಲಿ ಕುಂಕುಮಾರ್ಚನೆ ನಡೆಯಿತು.
         ಧ್ವಜಾರೋಹಣ, ಶಂಖನಾದ, ಗುರು ಗೋವಂದನೆ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ಪಾರಾಯಣದೊಂದಿಗೆ ಸಭೆ ಪ್ರಾರಂಭಗೊಂಡಿತು.  ಮುಳ್ಳೇರಿಯಾ ಮಂಡಲ ಅಧ್ಯಕ್ಷ ಪೆÇ್ರ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ಕಕ್ಕಳ ಗೋಪಾಲಕೃಷ್ಣ ಭಟ್ ವರದಿಯನ್ನು ನೀಡಿದರು. ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ ಲೆಕ್ಕಪತ್ರ ಮಂಡಿಸಿದರು.
         ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಉಪಸ್ಥಿತರಿದ್ದು, ಗೋಕರ್ಣದ ಅಶೋಕೆಯಲ್ಲಿ ನಿರ್ಮಾಣಗೊಳ್ಳಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಶ್ರೀ ಸಂಸ್ಥಾನದವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣ, ಸೆಪ್ಟೆಂಬರ್ 16 ರಿಂದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ನಡೆಯಲಿರುವ ರಾಮಾಯಣ ಚಾತುರ್ಮಾಸ್ಯದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನಗೈದ ವಿದ್ಯಾರ್ಥಿಗಳಾದ ಆಶಾ ಕಿಳಿಂಗಾರು, ಸಂಪನ್ನಾ ನಿಡುಗಳ, ನಂದನ  ಅಬ್ಬಿಮೂಲೆ ಕುಳಮರ್ವ, ಮಹಿಮಾ ಹೊಸಮನೆ, ಯಶಸ್ವಿನಿ ಕಿಳಿಂಗಾರು ಇವರನ್ನು ಗೌರವಿಸಲಾಯಿತು. ವೈದಿಕ ಪ್ರಮುಖರಾದ ವೇ.ಮೂ ಪ್ರಕಾಶ ಭಟ್ಟ ಕಿಳಿಂಗಾರು ಹಾಗೂ ಪಾಕಪ್ರವೀಣರಾದ ಗಣರಾಜ ಹಳೆಮನೆ ಇವರನ್ನು ಶಾಲುಹೊದೆಸಿ ಫಲವನ್ನಿತ್ತು ಸನ್ಮಾನಿಸಲಾಯಿತು.
        ಈ ಸಂದರ್ಭದಲ್ಲಿ ಗುರುಭಕ್ತರು ಭಾನ್ಕುಳಿಯಲ್ಲಿ ನಿರ್ಮಾಣಗೊಂಡ ಗೋಸ್ವರ್ಗಕ್ಕೆ ದೇಣಿಗೆ ಸಮರ್ಪಣೆಯನ್ನು ಮಾಡಿದರು. ಹರ್ಷಗಣೇಶ ಕಕ್ಕಳ ಇವರು ಮೂಲಮಠಕ್ಕೆ ದೇಣಿಗೆ ಸಮರ್ಪಿಸಿದರು.
       ಮಂಡಲ ಗುರಿಕ್ಕಾರ ಸತ್ಯನಾರಾಯಣ ಮೊಗ್ರ ಉಪಸ್ಥಿತರಿದ್ದು ಜುಲೈ 13 ಹಾಗೂ 14 ರಂದು ನಡೆಯಲಿರುವ ಗುರಿಕಾರರ ಸಭೆಯ ಕುರಿತು ಮಾಹಿತಿ ನೀಡಿದರು. ಮಹಾಮಂಡಲ ಧರ್ಮ*ಕರ್ಮ ವಿಭಾಗದ ಕೇಶವಪ್ರಸಾದ ಕೂಟೇಲು ಇವರು  ಆಗಸ್ಟ್ 1 ರಂದು ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ನಡೆಯಲಿರುವ ಸಾಮೂಹಿಕ ಆಶ್ಲೇಷ ಬಲಿ ಸೇವೆಯ ಕುರಿತು ಮಾಹಿತಿ ನೀಡಿದರು. ಮಂಡಲ ಮಾತೃ ವಿಭಾಗ ಪ್ರಧಾನೆ ಕುಸುಮಾ ಪೆರ್ಮುಖ, ಸಹಾಯ ವಿಭಾಗ ಪ್ರಧಾನ  ಡಾ| ಡಿ.ಪಿ ಭಟ್, ಶಿಷ್ಯಮಾಧ್ಯಮ ವಿಭಾಗ ಪ್ರಧಾನ ಸರಳಿ ಮಹೇಶ, ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ಧರ್ಮಕರ್ಮ ವಿಭಾಗ ಪ್ರಧಾನ ನವನೀತಪ್ರಿಯ ಕೈಪ್ಪಂಗಳ, ವಲಯಾಧ್ಯಕ್ಷ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ರಾಮತಾರಕಮಂತ್ರ, ಶಾಂತಿಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ವಲಯೋತ್ಸವ ಕಾರ್ಯಕ್ರಮ ಮುಕ್ತಾಯಗೊಂಡಿತು. ಮಂಡಲ ಪದಾಧಿಕಾರಿಗಳು, ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀಕಾರ್ಯಕರ್ತರು, ಗುರುಭಕ್ತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries