ಕಾಸರಗೋಡು: ಕಾಸರಗೋಡಿಗಾಗಿ ಸಿದ್ಧಪಡಿಸಿರುವ ಜಲಬಳಕೆ ನೀತಿ ಒಂದುತಿಂಗಳ ಅವಧಿಯಲ್ಲಿ ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಬು ತಿಳಿಸಿರುವರು.
ಜಿಲ್ಲಾ ಅಭಿವೃದ್ಧಿ ಸಮಿತಿ ಈಗಾಗಲೇ ಮಾತುಕತೆ ನಡೆಸಿರುವ ಜಲನೀತಿಯ ಕುರಿತು ಜಿಲ್ಲೆಯ ವಿವಿಧ ಜನಪ್ರತಿನಿಧಿಗಳ ಅಭಿಪ್ರಾಯ ಕ್ರೋಡೀಕರಿಸುವ ನಿಟ್ಟಿನಲ್ಲಿಕಳುಹಿಸಿಕೊಡಲಾಗಿದೆ. ಅವರ ಅಭಿಮತವನ್ನೂ ಪರಿಶೀಲಿಸಿ ಘೋಷಿಸಲಾಗುವ ಜಲನೀತಿಯ ಅನುಷ್ಠಾನ ರೂಪುರೇಷೆ 3 ತಿಂಗಳೊಳಗೆ ಸಿದ್ಧಗೊಳ್ಳಲಿದೆ ಎಂದು ಅವರು ನುಡಿದರು. ಜಿಲ್ಲೆಯಲ್ಲಿ ಜಲದ ದುರುಪಯೋಗ ನಿಯಂತ್ರಣ ಮತ್ತು ಜಲಸಂರಕ್ಷಣೆ ನಿಟ್ಟಿನಲ್ಲೂ ರೂಪುರೇಷೆ ಸಿದ್ಧಪಡಿಸಲಾಗುವುದು.

