ತಿರುವನಂತಪುರ: ಕಾರುಣ್ಯ ಯೋಜನೆಯನ್ನು ಹೆಚ್ಚುವರಿ ಆಕರ್ಷಕ ಮತ್ತು ಜನ ಪ್ರಯೋಜನಕಾರಿಯಾಗಿಸಿ, ಹೆಚ್ಚುವರಿ ಮಂದಿಗೆ ಅದರ ಪ್ರಯೋಜನೆ ಲಭಿಸುವಂತೆ ಮಾಡಲಾಗುವುದು ಎಂದು ಹಲವು ಬಾರಿ ತಿಳಿಸಲಾಗಿದ್ದರೂ, ಈ ಬಗ್ಗೆ ಕೆಲವು ಮಂದಿ ರಾಜಕೀಯ ಉದ್ದೇಶದಿಂದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ರಾಜ್ಯ ಹಣಕಾಸು ಸಚಿವ ಡಾ.ಥಾಮಸ್ ಐಸಕ್ ತಿರುವನಂತಪುರದಲ್ಲಿ ತಿಳಿಸಿರುವರು.
ಹಿಂದೆ ಒಬ್ಬರಿಗೆ ಬದುಕಿನಲ್ಲಿ ಒಮ್ಮೆ ಮಾತ್ರ ಗರಿಷ್ಠ 3 ಲಕ್ಷ ರೂ. ಚಿಕಿತ್ಸಾ ಸಹಾಯ ಲಭಿಸುತ್ತಿದ್ದ ಯೋಜನೆಯನ್ನು ಪ್ರತಿವರ್ಷ 5 ಲಕ್ಷ ರೂ. ವರೆಗೆ ಚಿಕಿತ್ಸಾ ಸಹಾಯ ಒದಗುವಂತೆ ವಿಮಾ ಯೋಜನೆಯಾಗಿಸಿ ಪರಿಷ್ಕರಿಸುವ ಕ್ರಮ ನಡೆದುಬರುತ್ತಿದೆ. ಈ ವಿಚಾರವನ್ನು ರಾಜ್ಯ ಮುಂಗಡಪತ್ರ ಮಂಡನೆ ವೇಳೆ ಸ್ಪಷ್ಟಪಡಿಸಲಾಗಿದ್ದು, ಈ ಬಾರಿಯ ವಿಧಾನಸಭಾ ಕಲಾಪದಲ್ಲೂ ಖಚಿತಪಡಿಸಲಾಗಿದೆ. ಹೀಗಿದ್ದೂ ಈ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಇದನ್ನು ಜನ ಗಮನಿಸಬೇಕು ಎಂದವರು ತಿಳಿಸಿದರು.
ವಿಧಾನಸಭೆಯಲ್ಲಿ ತಿಳಿಸಲಾದ ವಿಚಾರ ಶೀಗ್ರದಲ್ಲೇ ಸರಕಾರಿ ಆದೇಶ ರೂಪದಲ್ಲಿ ಪ್ರಕಟಗೊಳ್ಳಲಿದೆ. ಯಾವ ಅಕ್ರಿಟೆಡ್ ಆಸ್ಪತ್ರೆಗೂ ತೆರಳುವ ರೋಗಿಗೆ ಚಿಕಿತ್ಸೆ ನಿಷೇಧ ನಡೆಯಲು ಸಾಧ್ಯವಿಲ್ಲ. ಯಾವುದೇ ರೋಗಿಗೆ ಹೆಚ್ಚುವರಿ ವೆಚ್ಚ ನಡೆಯುವುದಿದ್ದಲ್ಲಿ ಅದನ್ನು ಸರಕಾರಿ ವತಿಯಿಂದ ಹೇಗೆ ಭರಿಸಬಹುದು ಎಂಬ ಬಗ್ಗೆ ಗಂಭೀರ ಮಾತುಕತೆ ನಡೆಸಲಾಗುವುದು. ಈ ಯಾವವಿಚಾರದಲ್ಲೂ ಸರಕಾರಿ ಆಸ್ಪತ್ರೆಗಳು ಯಾವ ಲೋಪವನ್ನೂ ನಡೆಸಲಾಗದು. ಮೆಡಿಕಲ್ ಕಾಲೇಜುಗಳು, ಜಿಲ್ಲಾ, ತಾಲೂಕು ಆಸ್ಪತ್ರೆಗಳು ಇತ್ಯಾದಿಗಳಿಗೆ ಈ ಸಂಬಂಧ ಕಡ್ಡಾಯ ಆದೇಶ ನೀಡಲಾಗಿದೆ.


