ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ, ಚಾಲದ ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಭಾರತೀಯ ಭಾಷಾ ಅಧ್ಯಯನಾಂಗದ ಆಶ್ರಯದಲ್ಲಿ ಜು.11 ರಂದು ಬೆಳಗ್ಗೆ 10 ರಿಂದ ಚಾಲ ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಎಂ.ಕೆ.ಜಿನಚಂದ್ರನ್ ದತ್ತಿ ಉಪನ್ಯಾಸ, ಕಮಲಮ್ಮ ದತ್ತಿ ಉಪನ್ಯಾಸ, ಗುಮ್ಮಣ್ಯ ಶೆಟ್ಟಿ ಜೈನ್ ದತ್ತಿ ಉಪನ್ಯಾಸ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅವರು ಅಧ್ಯಕ್ಷತೆ ವಹಿಸುವರು. ಹಿರಿಯ ಕವಯಿತ್ರಿ, ನಿವೃತ್ತ ಪ್ರಾಧ್ಯಾಪಿಕೆ ಡಾ.ಯು.ಮಹೇಶ್ವರಿ ಅವರು ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ, ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಅವರು ಕನ್ನಡ ಭಾಷೆ, ಸಾಹಿತ್ಯ ಸಂಸ್ಕøತಿ, ಕವಿ, ಸಹ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅವರು ತುಳು - ಕನ್ನಡ ಭಾಷಾ ಬಾಂಧವ್ಯ ಬಗ್ಗೆ ಉಪನ್ಯಾಸ ನೀಡುವರು.
ಕನ್ನಡ ವಿಭಾಗ, ಭಾರತೀಯ ಭಾಷಾ ಅಧ್ಯಯನಾಂಗ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಶುಭಹಾರೈಸುವರು. ವಿದ್ಯಾರ್ಥಿನಿಯರಿಂದ ಗಾನಸುಧೆ ನಡೆಯಲಿದೆ.

