ಪೆರ್ಲ: ರಾಜ್ಯ ಸರ್ಕಾರದ ಧಮನಕಾರಿ ದುರಾಡಳಿತದ ವಿರುದ್ದ ಸೋಮವಾರ ಯುಡಿಎಫ್ ಎಣ್ಮಕಜೆ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಪೆರ್ಲದಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮ ಪಂಚಾಯತಿ ಅನುದಾನದ ಕಡಿತಗೊಳಿಸುವಿಕೆ, ಕಾರುಣ್ಯ ಆರೋಗ್ಯ ಯೋಜನೆಯ ಸ್ಥಿಗಿತಗೊಳಿಸುವಿಕೆ, ವಿದ್ಯುತ್ ಬೆಲೆ ಏರಿಕೆ, ಪೋಲೀಸ್ ವಶದಲ್ಲಿರುವವರ ಕೊಲೆ, ಆತೂರು ಆತ್ಮಹತ್ಯೆ ಪ್ರಕರಣದ ಮೂಲಕ ಕಾನೂನು ಸುವ್ಯವಸ್ಥೆಯನ್ನು ಬುಡಮೇಲುಗೊಳಿಸಿದ ರಾಜ್ಯವನ್ನು ಆಳುವ ಎಡರಂಗ ಸರ್ಕಾರದ ಜನದ್ರೋಹಿ ಹಾಗೂ ಆಡಳಿತ ವೈಫಲ್ಯಗಳನ್ನು ಈ ಸಂದರ್ಭ ಪ್ರತಿಭಟಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಯುಡಿಎಫ್ ಕಾರ್ಯದರ್ಶಿ ಅಬೂಬಕರ್ ಪೆರ್ದನೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಬಿ.ಎಸ್.ಗಾಂಭೀರ್ ಉದ್ಘಾಟಿಸಿದರು. ಮುಖಂಡರಾದ ರವೀಂದ್ರನಾಥ ನಾಯಕ್, ಅಬೂಬಕರ್ ಸಿದ್ದೀಕ್ ಖಂಡಿಗೆ, ಐತ್ತಪ್ಪ ಕುಲಾಲ್, ಅಬ್ದುಲ್ಲ ಕುರೆಡ್ಕ, ಎ.ಕೆ.ಶರೀಫ್, ಹಮೀದ್ ಅಜಿಲಡ್ಕ, ಇಬ್ರಾಹಿಂ ಪೆರ್ಲ, ಎಂ.ಎಸ್.ಇಬ್ರಾಹಿಂ ಪ್ರತಿಭಟನೆಯ ನೇತೃತ್ವ ನೀಡಿದ್ದರು. ಅಬೂಬಕರ್ ಸಿದ್ದೀಕ್ ಒಳಮೊಗರು ಸ್ವಾಗತಿಸಿ, ವಂದಿಸಿದರು.


