HEALTH TIPS

ಎನ್‍ಎಸ್‍ಐಎಲ್ ಜತೆಗೆ ಇಸ್ರೋ ತಂತ್ರ ಜ್ಞಾ ನ ಸಂಯೋಜನೆಗೆ ಒತ್ತು-ನಿರ್ಮಲಾ ಸೀತಾರಾಮನ್

 
          ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಂತ್ರ ಜ್ಞಾ ನಗಳನ್ನು ಇನ್ನಷ್ಟು ವಾಣಿಜ್ಯ ವಲಯಕ್ಕೆ ಹತ್ತಿರವಾಗುವ ಮಾರ್ಗಗಳನ್ನು ಪ್ರಕಟಿಸಿದ್ದಾರೆ.  ನಿರ್ಮಲಾ ಸೀತಾರಾಮನ್ ಅವರು ಭಾರತದ ಬಾಹ್ಯಾಕಾಶ ಸಾಮಥ್ರ್ಯವನ್ನು ವಾಣಿಜ್ಯೀಕರಣಗೊಳಿಸಿ ಸಾರ್ವಜನಿಕ ವಲಯದ ಉದ್ಯಮವಾಗಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‍ಎಸ್‍ಐಎಲ್) ನೊಂದಿಗೆ ಬಳಸಿಕೊಳ್ಳಲು ಯೋಜಿಸಿದ್ದಾರೆ.
        ಇಸ್ರೋ ತಂತ್ರ ಜ್ಞಾ ನಗಳ ಪ್ರಯೋಜನವನ್ನು ಪಡೆದುಕೊಳ್ಲಲು ಎನ್ ಎಸ್ ಐ ಎಲ್ ಅನ್ನು ಅದರೊಡನೆ ಸಂಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಹೊಸ ಸಾರ್ವಜನಿಕ ವಲಯದ ಉದ್ಯಮವು ಇಸ್ರೋದ ವಾಣಿಜ್ಯೀಕರಣದ  ಅಂಗವಾಗಿದೆ ಮತ್ತು ಉಡಾವಣಾ ವಾಹನಗಳು ಹಾಗೂ ಬಾಹ್ಯಾಕಾಶ ಉತ್ಪನ್ನಗಳನ್ನು ವ್ಯಾಪಾರ ವಲಯಕ್ಕೆ ನಿಕಟವಾಗುವಂತೆ ಂಆಡಲಿದೆ ಎಂದು ಅವರು ಹೇಳಿದ್ದಾರೆ.
       ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಕೆಲವು ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಚಂದ್ರಯಣ್ 2 ಕಾರ್ಯಾಚರಣೆಗೆ ಸಜ್ಜಾಗಿದೆ. ದೇಶದ ಬಾಹ್ಯಾಕಾಶ ಸಾಮಥ್ರ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವನ್ನು ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಇದೇ ಕಾರಣದಿಂದಾಗಿ ಎನ್‍ಎಸ್‍ಐಎಲ್ ಗೆ ಇಸ್ರೋ ತಂತ್ರ ಜ್ಞಾ ನವನ್ನೂ ಸಂಯೋಜಿಸಿ ಉತ್ತೇಜನ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ಸಚಿವರು ಹೇಳಿದ್ದಾರೆ.
     "ಜಾಗತಿಕವಾಗಿ ಕಡಿಮೆ-ವೆಚ್ಚದಲ್ಲಿ  ಉಪಗ್ರಹಗಳು ಮತ್ತು ಇತರ ಬಾಹ್ಯಾಕಾಶ ಉತ್ಪನ್ನಗಳನ್ನು ಉಡಾವಣೆ ಮಾಡುವ ತಂತ್ರ ಜ್ಞಾ ನ ಮತ್ತು ಸಾಮಥ್ರ್ಯದೊಂದಿಗೆ ಭಾರತವು ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಇದನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುವ ಸಮಯ ಬಂದಿದೆ" ಎಂದು ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries