ಮಂಜೇಶ್ವರ: ಮಂಜೇಶ್ವರದ ಎಸ್ ಎ ಟಿ ಶಾಲೆಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಶ್ರೀಮದ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ಮಕ್ಕಳೊಂದಿಗೆ ನೇಜಿ ನೆಡುವ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು.
ಕೃಷಿಕರಾದ ಸದಾಶಿವ ಮೂಲ್ಯರ ನೇತೃತ್ವದಲ್ಲಿ ಮಕ್ಕಳು ನೇಜಿನೆಡುವ ಪ್ರಾತ್ಯಕ್ಷಿಕೆ ಪಡೆದರು. ಈ ಸಂದರ್ಭದಲ್ಲಿ ಮಂಜೇಶ್ವರದ ಸಹಾಯಕ ಕೃಷಿ ಅಧಿಕಾರಿ ಶಶೀ0ದ್ರನ್ ಮತ್ತು ಶಿವಪ್ರಸಾದ್ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಪ್ರಾಂಶುಪಾಲ ಮುರಳಿಕೃಷ್ಣ ಎನ್, ಗೈಡ್ ಅಧ್ಯಾಪಿಕೆಯರಾದ ಸುಕನ್ಯಾ ಕೆ ಟಿ, ಉಷಾ ಕುಮಾರಿ, ಸ್ಕೌಟ್ ಅಧ್ಯಾಪಕ ಲಕ್ಷ್ಮೀ ದಾಸ್ ಪ್ರಭು ಸಹಕರಿಸಿದರು.


