ಕಾಸರಗೋಡು: ಉಳಿದ ಯಾವುದೇ ಕೀಟನಾಶಕಗಳಂತೆ ಅಳತೆ ಮೀರಿ ಬಳಸಿದರೆ ಎಂಡೋಸಲ್ಫಾನ್ ಕೂಡ ಮಾರಕವಾಗಿ ಪರಿಣಮಿಸುತ್ತದೆ. ಇದರ ಪರಿಣಾಮ ಯಾವುದೇ ವ್ಯಕ್ತಿಗೆ ಆರೋಗ್ಯ ಸಮಸ್ಯೆಗಳು ತಲೆ ಎತ್ತಿವೆ ಎಂದು ವೈ ಜ್ಞಾ ನಿಕವಾಗಿ ಖಚಿತಗೊಂಡಿದ್ದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಮತ್ತು ಔದ್ಯೋಗಿಕ ನೆಲೆಯಲ್ಲಿ ತಾನು ಅವರ ಜೊತೆಗಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಕಟಣೆಯಲ್ಲಿ ತಿಳಿಸಿರುವರು.
ವೈದ್ಯಕೀಯ ಕಾಲೇಜಿನ ಪರಿಣತ ವೈದ್ಯರೂ ಸೇರಿರುವ ತಂಡ ನಡೆಸಿದ ತಪಾಸಣೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿ ಸಿದ್ಧಗೊಳಿಸಲಾಗುತ್ತದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಅಧ್ಯಕ್ಷರಾಗಿರುವ ಎಂಡೋಸಲ್ಫಾನ್ ಸಂತ್ರಸ್ತರ ಏಕೀಕಿರಣ ಮತ್ತು ಪುನರ್ವಸತಿಗಾಗಿರುವ ಘಟಕೀ ಪಟ್ಟಿಯನ್ನು ಅಂಗೀಕರಿಸುತ್ತದೆ. ಜಿಲ್ಲಾಧಿಕಾರಿ ಎಂಬ ನೆಲೆಯಲ್ಲಿ ಸಂವಿಧಾನಾತ್ಮಕ ರೀತಿ ಈ ವರೆಗೆ ಚಟುವಟಿಕೆ ನಡೆಸಿದ್ದೇನೆ. ಈ ಸಂಬಂಧ ಕೆಲವು ಹಿತಾಸಕ್ತಿಗಳು ಸಾರ್ವಜನಿಕರ ನಡುವೆ ತಪ್ಪು ಭಾವನೆ ಮೂಡಿಸುವ ರೀತಿಯ ಅಪಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕಟಣೆ ನೀಡಿರುವುದಾಗಿ ಅವರು ತಿಳಿಸಿದರು.

