ಬದಿಯಡ್ಕ: ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನೆಲ್ಲಿಕ್ಕಳಯ ನಿವಾಸಿ ಕೃಷ್ಣ ಅವರ ಮನೆಯ ಮಾಡಿನ ಪಾರ್ಶ್ವಭಾಗವು ಮುರಿದು ಬಿದ್ದಿದೆ.
ಮುರಿಯುತ್ತಿರುವ ಶಬ್ದ ಕೇಳಿದ ಕೂಡಲೇ ಮನೆಯವರು ಹೊರಗೆ ಓಡಿದ ಕಾರಣ ಯಾವುದೇ ಪ್ರಾಣಾಪಾಯ ಉಂಟಾಗಲಿಲ್ಲ. ಈ ವೇಳೆ ಕೃಷ್ಣ, ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಕೃಷ್ಣ ಅವರ ವೃದ್ಧ ಅಸೌಖ್ಯ ಪೀಡಿತರಾಗಿ ಮಲಗಿದ ತಂದೆ, ಅಕ್ಕ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿದ್ದರು. ಇದೀಗ ಹತ್ತಿರದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.


