ಕಾಸರಗೋಡು: ಜಲಸಂರಕ್ಷಣೆ ಮತ್ತು ಸುರಕ್ಷತೆಗೆ ಒಗ್ಗಟ್ಟಿನ ಯತ್ನ ಬೇಕು ಎಂದು ಕೇಂದ್ರ ಜಲಶಕ್ತಿ ಅಭಿಯಾನದ ಜಿಲ್ಲಾ ಮಟ್ಟದ ಹೊಣೆಗಾರಿಕೆಯ ಅಧಿಕಾರಿ ಅಶೋಕ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿಕಿರು ಸಭಾಂಗಣದಲ್ಲಿ ಶುಕ್ರವಾರ ನಡೆದ ಜಲಜಾಗೃತಿ ವಿಶೇಷ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಇಂದಿನ ಸ್ಥಿತಿಗತಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಹಳ ಖೇದಕರ ಜಲ ಪರಿಸ್ಥಿತಿಯಿದ್ದು, ಜನತೆಯ ಏಕತೆಯಿಂದ ಮಾತ್ರ ಪರಿಹಾರ ಸಾಧ್ಯ ಎಂದವರು ನುಡಿದರು. ವ್ಯಕ್ತಿಗತ ನೆಲೆಯಲ್ಲಿ ನೀರು ಲಭಿಸದೇ ಇರುವ ಸಮಸ್ಯೆಗಿಂತ ಸಾಮೂಹಿಕವಾಗಿ ಜಲಲಭ್ಯತೆಗೆ ಸಾರ್ವಜನಿಕ ಯತ್ನಗಳು ನಡೆಯಬೇಕು. ಜನಶಕ್ತಿಯನ್ನು ಇದಕ್ಕಾಗಿ ಏಕೀಕಿರಿಸಿ ಬಳಸಬೇಕು.ಈ ನಿಟ್ಟಿನಲ್ಲಿ ಪ್ರಾಯೋಗಿಕ ಜಲನೀತಿ ರಚಿಸಬೇಕು. ಜಲಸಂರಕ್ಷಣೆ ಚಟುವಟಿಕೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಹೊಣೆಗಾರಿಕೆ ಪ್ರಧಾನವಾಗಿದೆ ಎಂದವರು ನುಡಿದರು.


