ಕಾಸರಗೋಡು: ದೇಶಿಯ ಅಧ್ಯಾಪಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಒಂದು ದಿನದ ಅಧ್ಯಯನ ಶಿಬಿರವು ಕಾಸರಗೋಡು ಕೋ-ಅಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎನ್.ಟಿ.ಯು ಜಿಲ್ಲಾಧ್ಯಕ್ಷ ಕುಂಞಂಬು ಮಾಸ್ತರ್ ವಹಿಸಿದ್ದರು. ಪ್ರಾಂತ ಸಂಘಟನಾ ಕಾರ್ಯದರ್ಶಿ ಅಶೋಕ ಬಾಡೂರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಕಾಞಂಗಾಡು ವಿದ್ಯಾಭ್ಯಾಸ ಜಿಲ್ಲೆಯ ನಿವೃತ್ತ ವಿದ್ಯಾಧಿಕಾರಿ ವೇಲಾಯುಧನ್ ಅವರು ಅಧ್ಯಾಪನ ಸೇವೆಗೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಬಗ್ಗೆ ಮುಕ್ತ ಸಂವಾದ ನಡೆಸಿಕೊಟ್ಟರು. ಶಿಕ್ಷಕ ವೃಂದದ ಸಮಸ್ಯೆಗಳನ್ನು ಆಲಿಸಿ ಸ್ಪಷ್ಟವಾದ ಮಾರ್ಗ ನಿರ್ದೇಶನಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ.ಪಿ.ಶಿವಪ್ರಸಾದ್ ರಾಷ್ಟ್ರೀಯ ವಿದ್ಯಾಭ್ಯಾಸ ನೀತಿ ಕೆ.ಇ.ಆರ್.ಕೆ.ಎಸ್.ಆರ್. ಹಾಗೂ ಖಾದರ್ ಸಮಿತಿ ವರದಿಗಳ ಸಾಧಕ-ಬಾಧಕಗಳ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡಿಸಿದರು.
ಎನ್.ಟಿ.ಯು. ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿದರು. ಕೋಶಾ„ಕಾರಿ ಮಹಾಬಲ ಭಟ್ ವಂದಿಸಿದರು. ಪ್ರಭಾಕರ ನಾಯರ್ ಕಾರ್ಯಕ್ರಮ ನಿರೂಪಿಸಿದರು.


