ಬದಿಯಡ್ಕ: ಕಾಸರಗೋಡಿನ ಸಾಂಸ್ಕøತಿಕ, ಸಾಹಿತ್ತಿಕ ಸಂಸ್ಥೆಯಾದ ರಂಗಚಿನ್ನಾರಿಯ ಹೊಸ ಪರಿಕಲ್ಪನೆಯಡಿ ರೂಪುಗೊಂಡು ಇದೀಗಲೇ ಆರಂಭಗೊಂಡಿರುವ ಕನ್ನಡ ಶಾಲೆಗಳಲ್ಲಿ ಶಿಕ್ಷಣಕ್ಕಾಗಿ ನೃತ್ಯ ತಕಜಣುತಾದ ನೃತ್ಯ ಪ್ರಾತ್ಯಕ್ಷಿಕಾ ಕಾರ್ಯಕ್ರಮ ಇಂದು ಬೇಳ, ನಾಯ್ಕಾಪು ಹಾಗೂ ನೀರ್ಚಾಲು ಶಾಲೆಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಇಂದು ಬೆಳಿಗ್ಗೆ 9.45 ರಿಂದ 11.15ರ ವರೆಗೆ ಬೇಳ ಸೈಂಟ್ ಮೇರೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನದ ಮೊದಲ ಪ್ರದರ್ಶನ ಪ್ರಸ್ತುತಿಗೊಳ್ಳಲಿದೆ. ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಧರ್ಮಗುರು ಸ್ವಾಮಿ ಜೋನ್ ವಾಸ್ ಉದ್ಘಾಟಿಸುವರು. ನ್ಯಾಯವಾದಿ ಥೋಮಸ್ ಡಿಸೋಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಅವರಿಂದ ನೃತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ.
11.30 ರಿಂದ ಮಧ್ಯಾಹ್ನ 1ರ ವರೆಗೆ ನಾಯ್ಕಾಪು ಲಿಟಲ್ ಲಿಲ್ಲಿ ಶಾಲೆಯಲ್ಲಿ ನಡೆಯುವ ಎರಡನೇ ಪ್ರದರ್ಶನದಲ್ಲಿ ಶಾಲಾ ಪ್ರಾಂಶುಪಾಲ ರವಿಚಂದ್ರ ಅಧ್ಯಕ್ಷತೆ ವಹಿಸುವರು. ಕುಂಬಳೆ ಗ್ರಾ.ಪಂ.ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಉದ್ಘಾಟಿಸುವರು.
ಅಪರಾಹ್ನ 1.45 ರಿಂದ 3.15ರ ವರೆಗೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಪ್ರಾತ್ಯಕ್ಷಿಕಾ ಪ್ರದರ್ಶನವನ್ನು ಚಿತ್ರ ಕಲಾವಿದ, ನಿವೃತ್ತ ಶಿಕ್ಷಕ ಬಾಲ ಮಧುರಕಾನನ ಉದ್ಘಾಟಿಸುವರು.ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು.
ನಾಳೆ(ಬುಧವಾರ) ಬೆಳಿಗ್ಗೆ 9.45ರಿಂದ 11.15ರ ವರೆಗೆ ಕಾಂಞÂಂ ಗಾಡ್ ದುರ್ಗಾ ಹೈಸ್ಕೂಲಿನಲ್ಲಿ ಮೇಘರಂಜನಾ ಚಂದ್ರಗಿರಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಪ್ರದೀಪ್ ಅಧ್ಯಕ್ಷತೆ ವಹಿಸುವರು. ಪ್ರಬಂಧಕ ವೇಣುಗೋಪಾಲ ಉದ್ಘಾಟಿಸುವರು. 11.45ರಿಂದ 1.15ರ ವರೆಗೆ ಬೇಕಲ ಸರಕಾರಿ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಅಧ್ಯಕ್ಷತೆ ವಹಿಸುವರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ವಿ.ಶ್ರೀಧರ್ ಉದ್ಘಾಟಿಸುವರು. ಅಪರಾಹ್ನ 2 ರಿಂದ 3.15ರ ವರೆಗೆ ಚಂದ್ರಗಿರಿ ಸರಕಾರಿ ಹೈಸ್ಕೂಲಿನಲ್ಲಿ ನಡೆಯುವ ಪ್ರಾತ್ಯಕ್ಷಿಕಾ ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಉಬ್ರಂಗಳ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ವಸಂತಿ ಟೀಚರ್ ಉದ್ಘಾಟಿಸುವರು.
ರಂಗಚಿನ್ನಾರಿ ನಿರ್ದೇಶಕರಾದ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ., ಕೋಳಾರು ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ತಕಜಣುತಾದ ನೇತೃತ್ವ ವಹಿಸಿ ಮುನ್ನಡೆಸುತ್ತಿರುವರು.


