ಕಾಸರಗೋಡು: ವಾಚನ ಪಕ್ಷಾಚರಣೆ ಅಂಗವಾಗಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಶುಕ್ರವಾರ ನಡೆಯಿತು.
ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ನಡೆಸಿದ ವಿವಿಧ ಸ್ಪರ್ಧೆಗಳ ಮತ್ತು ಜಿಲ್ಲಾ ಸಾಕ್ಷರತೆ ಮಿಷನ್ ವತಿಯಿಂದ ನಡೆದ ತತ್ಸಮಾನ ತರಗತಿಗಳ ವಿದ್ಯಾರ್ಥಿಗಳ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ಜಿಲ್ಲಾಧಿಕಾರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್) ಎಸ್.ಎ.ಸಜಿಕುಮಾರ್ ಬಹುಮಾನ ವಿತರಿಸಿದರು. ಸಾಕ್ಷರತಾ ಜಿಲ್ಲಾ ಸಂಚಾಲಕ ಷಾಜು ಜೋನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್ ಎಂ., ಸಹಾಯಕ ವಾರ್ತಾ ಅಧಿಕಾರಿ ಸಿ.ಟಿ.ಜಾನ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಮಲೆಯಾಳಂ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, 18 ಮಂದಿಗೆ ಬಹುಮಾನ ವಿತರಿಸಲಾಗಿದೆ.


