HEALTH TIPS

ಚಿನ್ಮಯ ವಿದ್ಯಾಲಯದ ವಿವಿಧ ಕ್ಲಬ್‍ಗಳ ಉದ್ಘಾಟನೆ- ಕ್ಲಬ್‍ಗಳು ಹೊಸತರ ಬಗ್ಗೆ ಚಿಂತನೆ ಮೂಡಿಸಬೇಕು : ಡಾ|ರಾಜೇಂದ್ರ ಪಿಲಾಂಗಟ್ಟೆ


      ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ 2019-20 ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕರ ಪ್ರತಿಜ್ಞಾ ವಿಧಿ ಸಮಾರಂಭವು ತೇಜಸ್ ಸಭಾಂಗಣದಲ್ಲಿ ಜರಗಿತು.
     ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ವಿದ್ಯಾರ್ಥಿಗಳಿಂದ ಆಯ್ಕೆಯಾದ ಶಾಲಾ ನಾಯಕ ಅಖಿಲೇಶ್ ಶಶೀಂದ್ರನ್, ಶಾಲಾ ನಾಯಿಕೆ ಆಯಿಷತ್ ಹುದ, ಸಹನಾಯಕ ರಾಹುಲ್ ರಾಜ್ ಪಿಳ್ಳೆ, ಸಹ ನಾಯಿಕೆ ಆಯಿಷ ಅಫ್ನ ಅವರ ಹೆಸರನ್ನು ಘೋಷಿಸಿದರು. ಪ್ರತಿಜ್ಞೆ ಸ್ವೀಕಾರದ ಬಳಿಕ ತಮ್ಮ ಆಶೀರ್ವಚನ ಭಾಷಣದಲ್ಲಿ ಮಾತನಾಡಿದ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಜಿ ಶಾಲಾ ನಾಯಕ ಹಾಗು ನಾಯಿಕೆಯರು ಶಿಸ್ತಿನ ಚುಕ್ಕಾಣಿ ಹಿಡಿದವರಾಗಿದ್ದು ಯಾವುದೇ ಆರೋಪಗಳಿಗೆ ಗುರಿಯಾಗ ಬಾರದು. ಗರಿಷ್ಠ ನಿಸ್ವಾರ್ಥಿಯಾಗಿದ್ದು ಸೇವಾ ಮನೋಭಾವದಿಂದ ಉಳಿದವರಿಗೆ ಮಾದರಿಯಾಗಿರಬೇಕು. ಇವರಿಂದ ಶಾಲಾ ವರ್ಚಸ್ಸು ಉತ್ಕøಷ್ಟ ಮಟ್ಟಕ್ಕೇರಲಿ ಎಂದು ಹಾರೈಸಿದರು.
     ಬಳಿಕ ನಡೆದ ವಿದ್ಯಾಲಯದ ವಿವಿಧ ಕ್ಲಬ್‍ಗಳ ಉದ್ಘಾಟನೆಯನ್ನು ನಡೆಸಿದ ಸೆಂಟ್ರಲ್ ಯುನಿವರ್ಸಿಟಿ ಕೇರಳದ ಬಯೋ ಕೆಮಿಸ್ಟ್ರಿ ವಿಭಾಗದ ಪೆÇ್ರಫೆಸರ್ ಡಾ|ರಾಜೇಂದ್ರ ಪಿಲಾಂಗಟ್ಟೆ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಶಾಲೆಗಳಲ್ಲಿ ಮಾತ್ರ ಉತ್ಸುಕರಾದ ಬಾಲಕರನ್ನು ಗುರುತಿಸಬಹುದು. ಆದುದರಿಂದಲೇ ಡಾ|ಅಬ್ದುಲ್ ಕಲಾಂ ವಿದ್ಯಾರ್ಥಿಗಳನ್ನು ಹಾಗು ಯುವಕರನ್ನುದ್ದೇಶಿಸಿ ಮಾತನಾಡಲು ಬಯಸುತ್ತಿದ್ದರು. ಯುವಕರು ಸಾ„ಸಿದರೆ ಮಾತ್ರ ದೇಶ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಮನಗಂಡರು. ಕ್ಲಬ್‍ಗಳು ಹೊಸತರ ಬಗ್ಗೆ ಚಿಂತನೆ ಮೂಡಿಸುವಲ್ಲಿ, ಸಂಶೋಧನೆಗಳನ್ನು ನಡೆಸುವುದರ ಬಗ್ಗೆ ಮಕ್ಕಳಿಗೆ ಪ್ರಚೋದನೆ ನೀಡುವಂತಿರಬೇಕು. ಈ ಬಗ್ಗೆ ಅಧ್ಯಾಪಕರು ಮಾರ್ಗದರ್ಶನ ನೀಡಬೇಕು ಎಂದರು.
      ವಿದ್ಯಾರ್ಥಿಗಳು ಚಿಕ್ಕ ವಿಜ್ಞಾನಿಗಳೂ ಆಗಿರುವರು. ಈ ಶೈಕ್ಷಣಿಕ ವರ್ಷದ ಮಕ್ಕಳ ಚಟುವಟಿಕೆಗಳು ಈ ನಿಟ್ಟಿನಲ್ಲಿ ಫಲಪ್ರದವಾಗಲಿ ಎಂದು ಡಾ|ರಾಜೇಂದ್ರ ಪಿಲಾಂಗಟ್ಟೆ ಹಾರೈಸಿದರು. ದೇವರು ನಮ್ಮೊಳಗೇ ಇದ್ದಾನೆ ಎಂದು ಸಂತ ಕಬೀರ್‍ದಾಸ್ ಹೇಳಿದಂತೆ ಕೌಶಲ, ಸಾಮಥ್ರ್ಯಗಳು ನಮ್ಮೊಳಗೇ ಇದೆ. ಕಾರ್ಯಪ್ರವೃತ್ತರಾದರೆ ಫಲ ನಿಶ್ಚಿತ ಎಂದು ಅವರು ವಿದ್ಯಾರ್ಥಿಗಳನ್ನು ಪ್ರಚೋದಿಸಿದರು. ನಿದಾ ಆಯಿಷ ಸ್ವಾಗತಿಸಿ, ಆಯಿಷತ್ ಅಫ್ನ ವಂದಿಸಿದರು. ಆಯಿಷ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries