ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ವಿಷ್ಣುಶರಣ ಬನಾರಿ ಅವರ ವತಿಯಿಂದ ವಿಶೇಷ ಯಕ್ಷಗಾನ ತಾಳಮದ್ದಳೆ ಕಲಾಸೇವೆಯು ಶ್ರೀ ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ಇತ್ತೀಚೆಗೆ ನೆರವೇರಿತು.
ಕೀರಿಕ್ಕಾಡು ವನಮಾಲ ಕೇಶವ ಭಟ್ ಅವರ ನೇತೃತ್ವದಲ್ಲಿ ಜರಗಿದ `ದಾನಶೂರ ಕರ್ಣ' ಯಕ್ಷಗಾನ ತಾಳಮದ್ದಳೆಯ ಆರಂಭದಲ್ಲಿ ಸರೋಜಿನಿ ಬನಾರಿ ಅವರು ಸ್ವಾಗತಿಸಿದರು. ಭಾಗವತರಾಗಿ ವಿಶ್ವವಿನೋದ ಬನಾರಿ, ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ ಸಹಕರಿಸಿದರು. ಚೆಂಡೆಮದ್ದಳೆಗಳಲ್ಲಿ ಕಲ್ಲಡ್ಕ ಶಿವರಾಮ ಕಲ್ಲೂರಾಯ, ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ನಾರಾಯಣ ಪಾಟಾಳಿ ಮಯ್ಯಾಳ, ಸದಾನಂದ ಮಯ್ಯಾಳ, ವಿಷ್ಣುಶರಣ ಬನಾರಿ ಭಾಗವಹಿಸಿದರು. ರಾಮನಾಯ್ಕ ದೇಲಂಪಾಡಿ ಅವರು ಚಕ್ರತಾಳ ಸಹಕರಿಸಿದರು.
ಅರ್ಥಧಾರಿಗಳಾಗಿ ಕೀರಿಕ್ಕಾಡು ಗಣೇಶ ಶರ್ಮ ಸಿದ್ಧಕಟ್ಟೆ (ಕರ್ಣ), ನಾರಾಯಣ ದೇಲಂಪಾಡಿ (ಅರ್ಜುನ 1ನೇ ಭಾಗ), ಎ.ಜಿ.ಮುದಿಯಾರು (ಅರ್ಜುನ 2ನೇ ಭಾಗ), ಕಲ್ಲಡ್ಕ ಗುತ್ತು ರಾಮಯ್ಯ ರೈ(ಶ್ರೀಕೃಷ್ಣ 1ನೇ ಭಾಗ), ರಾಮಣ್ಣ ಮಾಸ್ತರ್ ದೇಲಂಪಾಡಿ (ಶ್ರೀಕೃಷ್ಣ 2ನೇ ಭಾಗ), ಎಂ.ರಮಾನಂದ ರೈ ದೇಲಂಪಾಡಿ (ಶಲ್ಯ), ವಿಕೇಶ್ ರೈ ಶೇಣಿ (ಅಶ್ವಸೇನ), ಬಿ.ಎಚ್.ವೆಂಕಪ್ಪ ಗೌಡ (ವೃದ್ಧ ಬ್ರಾಹ್ಮಣ) ಪಾತ್ರಧಾರಿಗಳಾಗಿ ಜನಮನವನ್ನು ರಂಜಿಸಿದರು. ದಿವ್ಯಾನಂದ ಪೆಂರ್ದಲಪದವು ಅವರು ವಂದಿಸಿದರು.


