ಪೆರ್ಲ: ಗ್ರಂಥಾಲಯಗಳು ನಾಡಿನ ಸಂಪತ್ತು. ಓದುವ ಹವ್ಯಾಸಗಳು ಮನುಷ್ಯನನ್ನು ಪ್ರಭುದ್ಧಗೊಳಿಸುತ್ತದೆ. ಸೌಹಾರ್ದದ ಸುಂದರ ಬದುಕಿಗೆ ಗ್ರಂಥಾಲಯ ಮಾರ್ಗದರ್ಶಿಯಾಗಲಿ ಎಂದು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ.ಅವರು ಹೇಳಿದರು.
ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಂಥಾಲಯದ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತ ಅವರು ಸಮಾಜದ ಎಲ್ಲರೂ ಲೈಬ್ರೆರಿ ಉಪಯೋಗ ಪಡೆದು, ಮಕ್ಕಳಿಗೆ ಓದುವ ಹವ್ಯಾಸ ಬೆಳೆಸುವ ಅಗತ್ಯ ವಿವರಿಸಿದರು.
ಗ್ರಂಥಾಲಯದ ವಿವಿಧ ಯೋಜನೆಗಳನ್ನು ರೂಪೀಕರಿಸಲಾಯಿತು. ನಾರಾಯಣ ಗೋಳಿತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸದಾನಂದ ಸ್ವಾಗತಿಸಿ, ವಂದಿಸಿದರು. ವಿನೋದ್, ವಸಂತ, ರಮೇಶ, ರೇಖಾ, ಹರ್ಷಿತ್ ಮೊದಲಾದವರು ಉಪಸ್ಥಿತರಿದ್ದರು.


