ಕಾಸರಗೋಡು: ಜಿಲ್ಲೆಯ ಪ್ರಥಮ ನೌಕರಿ ಖಾತರಿ ಸೋಷ್ಯಲ್ ಆಡಿಟ್ ಗ್ರಾಮಸಭೆ ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ನ 11ನೇ ವಾರ್ಡ್ ಚೀಮೇನಿಯಲ್ಲಿ ಇಂದು(ಜು.24) ನಡೆಯಲಿದೆ.
ಇಂದು ಬೆಳಿಗ್ಗೆ 10.30ಕ್ಕೆ ಕಯ್ಯೂರು-ಚೀಮೇನಿ ಪಂಚಾಯತ್ ಸಭಾಂಗಣದಲ್ಲಿ ಈ ಗ್ರಾಮಸಭೆ ಜರುಗಲಿದೆ. ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆಯ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ ನಲ್ಲಿ ಜಾರಿಗೊಳಿಸುವ ನೌಕರಿ ಖಾತರಿ ಚಟುವಟಿಕೆಗಳು ಪ್ರತಿ 6 ತಿಂಗಳಿಗೊಮ್ಮೆ ಪರಿಶೀಲನೆಗೆ ಒಳಗಾಗಿಸಬೇಕು. ಯೋಜನೆ ಜಾರಿಗೊಂಡ ನಂತರ ಸಿ.ಎ.ಜಿ.ಯ ಮಾರ್ಗದರ್ಶನ ಪ್ರಕಾರ ಸಮಗ್ರ ಸೋಷ್ಯಲ್ ಆಡಿಟ್ ರಾಜ್ಯದಲ್ಲಿ ಪ್ರಥಮ ಬಾರಿಗೆ ಇಂದು ಜಾರಿಗೊಳ್ಳುತ್ತಿದೆ.

