'
ಕಾಸರಗೋಡು: ಖ್ಯಾತ ಚಲನಚಿತ್ರ, ರಂಗಭೂಮಿ ನಟ, ನಿರ್ದೇಶಕ, ಸಂಘಟಕ, ಕಾಸರಗೋಡು ಚಿನ್ನಾ ಅವರಿಗೆ ಬೆಂಗಳೂರಿನ ಅಜಿತ್‍ಕುಮಾರ್ ಸ್ಮಾರಕ ಸಾಂಸ್ಕøತಿಕ ವೇದಿಕೆ ಇವರು ಕೊಡಮಾಡುವ ಜೀವಮಾನ ಸಾಧನೆ ರಾಷ್ಟ್ರೀಯ ಪ್ರಶಸ್ತಿ 'ಅಜಿತಶ್ರೀ'ಗೆ ಭಾಜನರಾಗಿದ್ದಾರೆ.
ರಂಗಭೂಮಿ, ಸಿನಿಮಾ, ಸಾಹಿತ್ಯ, ಸಂಘಟನೆ, ಸಂಗೀತ, ನಿರ್ದೇಶನ, ಭಾಷಾಂತರ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಾಸರಗೋಡು ಚಿನ್ನಾ ಅವರಿಗೆ ಜು. 18 ರಂದು ಸಂಜೆ 6. ಕ್ಕೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ನ್ಯಾಯಮೂರ್ತಿ ಎಂ. ಎನ್, ವೆಂಕಟಾಚಲಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸುವರು. ಮುಖ್ಯ ಅತಿಥಿಯಾಗಿ ಕನ್ನಡದ ಖ್ಯಾತ ಕವಿ ಡಾ. ಹೆಚ್. ಎಸ್. ವೆಂಕಟೇಶಮೂರ್ತಿ ಭಾಗವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು, ಕುಟುಂಬ ಪ್ರಭೋದನ್ ಸು. ರಾಮಣ್ಣ ಅವರು ಅಜಿತ ಸ್ಮರಣೆ ಮಾಡಲಿದ್ದಾರೆ. ಉಳಿದಂತೆ ಖ್ಯಾತ ಭರತನಾಟ್ಯ ಕಲಾವಿದೆ ಡಾ. ತುಳಸಿ ರಾಮಚಂದ್ರ, ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸ ವಿದ್ವಾನ್ ಎಸ್. ಶಂಕರ್, ಖ್ಯಾತ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರಿಗೆ 'ನಾಟ್ಯಶ್ರೀ' ಪ್ರಶಸ್ತಿ ನೀಡಲಿದ್ದಾರೆ.
ಜೀವಮಾನ ಸಾಧನೆ ರಾಷ್ಟ್ರೀಯ 'ಅಜಿತಶ್ರೀ' ಪ್ರಶಸ್ತಿ ಪುರಸ್ಕøತರಾದ ಕಾಸರಗೋಡು ಚಿನ್ನಾ ಅವರಿಗೆ ರೂ. 50,000, ಬೆಳ್ಳಿಪದಕ, ಪ್ರಶಸ್ತಿ ಪತ್ರ ನೀಡಲಿದೆಯೆಂದು ಅಜಿತ್‍ಕುಮಾರ್ ಸ್ಮಾರಕ ಸಾಂಸ್ಕøತಿಕ ವೇದಿಕೆ ಕಾರ್ಯದರ್ಶಿ ಕೆ.ಆರ್. ಮುರಳೀಧರ ತಿಳಿಸಿದರು. ಕಾರ್ಯಾಧ್ಯಕ್ಷರಾಗಿ ನ್ಯಾ. ಎಂ. ಎಫ್. ಸಲ್ಡಾನ್ಹ, ಅಧ್ಯಕ್ಷರಾಗಿ ಡಾ. ಬಿ. ಎಲ್. ಶಂಕರ್, ಪ್ರಧಾನ ಪೋಷಕರಾಗಿ ಮಾಜಿಮಂತ್ರಿ ಪಿ. ಜಿ. ಆರ್. ಸಿಂಧ್ಯ, ನಾಟಕಗಾರ ಡಾ. ಬಿ. ವಿ. ರಾಜರಾಂ, ಶ್ರೀನಿವಾಸ ಮೇಷ್ಟ್ರು ಮುಂತಾದವರಿರುವ ಸಮಿತಿಯಲ್ಲಿ ಸರ್ವಾನುಮತದಿಂದ ಅಜಿತಶ್ರೀ ಪ್ರಶಸ್ತಿಗೆ ಕಾಸರಗೋಡು ಚಿನ್ನಾ ಹೆಸರನ್ನು ಆರಿಸಲಾಯಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಐಶ್ವರ್ಯ ನಿತ್ಯಾನಂದ ಅವರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.