ತಿರುವನಂತಪುರಂ: ಮುಂಬರುವ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಅನಿವಾಸಿ ಕೇರಳಿಗರಿಗೆ ಮತದಾನದ ಹಕ್ಕು ನೀಡುವ ಬಗ್ಗೆ ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿರುವ ಪಿಣರಾಯಿ ವಿಜಯನ್, ಕೇರಳ ಅನಿವಾಸಿಗಳಿಗೆ ಮತದಾನದ ಹಕ್ಕು ದೊರೆಯಬೇಕಾದರೆ ಹಲವು ಪ್ರಕ್ರಿಯೆಗಳಿವೆ ನಿರ್ದಿಷ್ಟ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ. ಸಂಬಂಧಪಟ್ಟವರೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಲವು ದಶಕಗಳಿಂದ ಕೇರಳ ಆರ್ಥಿಕತೆಯ ಬೆನ್ನೆಲುಬಾಗಿರುವ ಅನಿವಾಸಿ ಕೇರಳಿಗರಿಗೆ ಮತದಾನದ ಹಕ್ಕು ದೊರೆಯಬೇಕು, ಅನಿವಾಸಿ ಭಾರತೀಯರಿಗೆ ಮತದಾನ ಮಾಡುವ ಹಕ್ಕನ್ನು ಲೋಕಸಭೆಯಲ್ಲೂ ಅಂಗೀಕರಿಸಲಾಗಿದೆ. ಆದ್ದರಿಂದ ಅನಿವಾಸಿ ಕೇರಳಿಗರಿಗೂ ಮತದಾನ ಮಾಡುವ ಹಕ್ಕು ದೊರೆಯಬೇಕೆಂದು ವಿಪಕ್ಷದ ಉಪನಾಯಕ ಎಂ.ಕೆ ಮುನೀರ್ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಸದನಕ್ಕೆ ಮಾಹಿತಿ ನೀಡಿದ್ದಾರೆ.


