ಉಪ್ಪಳ: ಚಿಪ್ಪಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2019-20 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಾಹಾಸಭೆ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಯರಾಮ ಅಮ್ಮೇರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಗ್ರಾ.ಪಂ. ಸದಸ್ಯೆ ರಸಿಯಾ, ಮಾತೃ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಚಿಪ್ಪಾರು ಮಾತನಾಡಿದರು. ಮುಖ್ಯೋಪಾಧ್ಯಾಯ ದಾಸಪ್ಪ ಶೆಟ್ಟಿ ವರದಿ ಮಂಡಿಸಿದರು. 2019-20 ನೇ ಸಾಲಿನ ಹೊಸ ರಕ್ಷಕ ಶಿಕ್ಷಕ ಹಾಗೂ ಮಾತೃ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಶ್ರಫ್ ಸೋಕೆ, ಉಪಾಧ್ಯಕ್ಷರಾಗಿ ಜಯರಾಮ ಅಮ್ಮೇರಿ ಮತ್ತು ಕಲೀಲ್ ನಾರ್ಣಕಟ್ಟೆ, ಮಾತೃ ಸಂಘದ ಅಧ್ಯಕ್ಷರಾಗಿ ಜಯಶ್ರೀ ಚಿಪ್ಪಾರು, ಉಪಾಧ್ಯಕ್ಷರಾಗಿ ಜಯಲಕ್ಷ್ಮೀ ಚಿಪ್ಪಾರು ಮತ್ತು ಯವ್‍ಜಿನ ಡಿ'ಸೋಜ ಅಮ್ಮೇರಿ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಮಕ್ಕಳಿಗೆ ಪ್ರತಿದಿನ ಬೆಳಿಗ್ಗಿನ ಉಪಹಾರ ನೀಡಲು ಕ್ರಮ ಕೈಗೊಳ್ಳಲಾಯಿತು. ಅಧ್ಯಾಪಕರಾದ ಶೇಖರ ಶೆಟ್ಟಿ ಕುಳ್ಯಾರ್ ಸ್ವಾಗತಿಸಿ, ಚಂದ್ರಶೇಖರ ಭಟ್ ವಂದಿಸಿದರು.



