ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆಗೆ ಹೊಸತಾಗಿ ಕಾಲಿರಿಸಿದ ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿಸುವ ಪ್ರಾಚೀನ ವಸ್ತುಗಳನ್ನು ಅಕ್ಕರೆಯಿಂದ ಶಾಲೆಗೆ ತಂದು ತರಗತಿಯಲ್ಲಿ ಪ್ರದರ್ಶಿಸಿ ಸಂತಸ ಪಟ್ಟರು.
ಆಧುನಿಕ ಉಪಕರಣಗಳ ಉಪಯೋಗವೇ ಅಧಿಕವಾಗಿರುವ ಈ ಕಾಲಘಟ್ಟದಲ್ಲಿ ಹಳೆಯ ಕಾಲದ ನಾಣ್ಯ, ಗಿಂಡಿ, ಸ್ಟ್ಯಾಂಪ್, ತಾಳೆಗರಿ, ಪರೆ, ಮುಟ್ಟಪ್ಪಾಳೆ ಮಕ್ಕಳನ್ನು ಆಕರ್ಷಿಸಿತು. ಇತಿಹಾಸವನ್ನು ತಿಳಿಯಲು ಸಹಾಯಕವಾಗುವ ಇಂತಹ ವಸ್ತುಗಳನ್ನು ಜಾಗರೂಕತೆಯಿಂದ ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವೆಂದು ಶಿಕ್ಷಕ ಅವಿನಾಶ ಕಾರಂತ.ಎಮ್ ವಿದ್ಯಾರ್ಥಿಗಳಿಗೆ ಈಸಂದರ್ಭ ತಿಳಿಸಿದರು.
ಶತಮಾನಗಳನ್ನು ದಾಟಿ 105 ವರ್ಷಗಳಷ್ಟು ಹಳೆಯದಾದ ನೀರ್ಚಾಲು ವಿದ್ಯಾಸಂಸ್ಥೆ ಪರಂಪರೆಯ ಕತೆಗಳ ಕೊಂಡಿಯಾಗಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ಸುಲಲಿತವಾಗಿ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.


