ನವದೆಹಲಿ: ಹೆಚ್ಚುತ್ತಿರುವ ಗುಂಪು ಹಲ್ಲೆಗಳನ್ನು ನಿಯಂತ್ರಿಸುವುದಕ್ಕೆ ಕಾನೂನು ರೂಪಿಸಲು ಸುಪ್ರೀಂ ಕೋರ್ಟ್ ನಿರ್ದೆಶನ ನೀಡಿದ ಒಂದು ವರ್ಷದ ಬಳಿಕ ಈ ನಿಟ್ಟಿನಲ್ಲಿ ಕಾಯ್ದೆ ಮಂಡನೆಯಾಗುವ ಸುಳಿವು ದೊರೆತಿದೆ.
ಸಂಸತ್ ನ ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಲಾಗುತ್ತದೆ ಎಂದು ಐಎಎಐ ಸ್ ವರದಿ ಪ್ರಕಟಿಸಿದೆ.
ಸಾಮಾಜಿಕ ಜಾಲತಾಣಗಳಿಂದ ಹರಡುವ ವದಂತಿಗಳಿಂದ ಉಂಟಾಗುತ್ತಿರುವ ಗುಂಪು ಹಲ್ಲೆ, ಹಲ್ಲೆ ಪ್ರಕರಣಗಳನ್ನು ಪರಿಶೀಲಿಸಿ ಮಸೂದೆ ತಯಾರಿಸಲು ಗೃಹ ಸಚಿವಾಲಯ ಕಾನೂನು ಸಚಿವಾಲಯವನ್ನು ಕೇಳಿದೆ.
ಗುಂಪುಹಲ್ಲೆ ತಡೆಗಟ್ಟುವುದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಸಹ ಯಾವುದೇ ಕಾಯ್ದೆಯನ್ನೇಕೆ ಈ ವರೆಗೂ ರೂಪಿಸಿಲ್ಲ, ಸುಪ್ರೀಂ ಕೋರ್ಟ್ ನಿರ್ದೇಶನ ಬೇರೆ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ಅನ್ವಯವಾಗುತ್ತದೆಯೆಂದಾದರೆ ಇದಕ್ಕೆ ಏಕೆ ಅನ್ವಯವಾಗುವುದಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದರು.


