ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ವಿವಿಧ ಕ್ಲಬ್‍ಗಳ ಉದ್ಘಾಟನೆ ಶುಕ್ರವಾರ ನಡೆಯಿತು.
ಹೈಯರ್ ಸೆಕೆಂಡರೀ ಶಿಕ್ಷಕ ರಂಜಿತ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಸರಸ್ವತಿ.ಕೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಶಂಕರ್ ರಾಜ್, ನೌಕರ ಸಂಘದ ಕಾರ್ಯದರ್ಶಿ ಶರತ್ ಕುಮಾರ್ ಉಪಸ್ಥಿತರಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು. ಶಿಕ್ಷಕಿ ಸುರಸಿ ಸ್ವಾಗತಿಸಿ, ಶಿಕ್ಷಕ ಅಜಿತ್ ವಂದಿಸಿದರು.


