ಮುಳ್ಳೇರಿಯ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸ್ಪೆಷ್ಯಲಿಸ್ಟ್ ವೈದ್ಯಕೀಯ ಶಿಬಿರ ನಾಳೆ(ಜು.10) ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್.ನಲ್ಲಿ ನಡೆಯಲಿದೆ.
2017 ಏ.8ರಂದು ಮುಳಿಯಾರಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಸಲಾಗಿದ್ದ ವೈದ್ಯಕೀಯ ಶಿಬಿರದಲ್ಲಿ ಸ್ಲಿಪ್ ಲಭಿಸಿದ್ದರೂ, ಅಂದು ನಡೆದಿದ್ದ ಹರತಾಳದ ಕಾರಣದಿಂದ ಹಾಜರಾಗಲು ಸಾಧ್ಯವಿಲ್ಲದೇ ಇದ್ದವರಿಗಾಗಿ ಈ ಶಿಬಿರ ನಡೆಸಲಾಗುತ್ತಿದೆ.
ಶಿಬಿರದಲ್ಲಿ ಭಾಗವಹಿಸಬೇಕಾದವರಿಗಿರುವ ಸ್ಲಿಪ್ ಗಳನ್ನು ಈಗಾಗಲೇ ಆಯಾ ಪ್ರದೇಶಗಳ ಆರೋಗ್ಯ ಸಂಸ್ಥೆಗಳ ಮುಖಾಂತರ ವಿತರಿಸಲಾಗಿದೆ. ಈ ಸ್ಲಿಪ್ ಗಳನ್ನು ಹೊಂದಿವರಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಮೆಡಿಕಲ್ ಕಾಲೇಜುಗಳ 10ಸ್ಪೆಷ್ಯಲಿಸ್ಟ್ ಗಳು ಈ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸುವರು.
ಸ್ಲಿಪ್ ಲಭಿಸಿದವರು ಶಿಬಿರ ಸ್ಪೆಷ್ಯಲಿಟಿ ಕೌಂಟರ್ ನಲ್ಲಿ ಹೆಸರು ನೋಂದಣಿ ನಡೆಸಿ, ನಂತರ ಹೊರರೋಗಿ ವಿಭಾಗದಲ್ಲಿ ತಪಾಸಣೆಗೆ ಒಳಗಾಗಬೇಕು.

