ಮಂಜೇಶ್ವರ: ತೊಟ್ಟೆತ್ತೋಡಿ ಟಿ.ರಾಮ ಬಂಗೇರ ಗ್ರಂಥಾಲಯ ವತಿಯಿಂದ ವಾಣೀ ವಿಲಾಸ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಪಕ್ಷಾಚರಣೆ ಮತ್ತು ಐ.ವಿ.ದಾಸ್ ಸಂಸ್ಮರಣೆಯನ್ನು ತಾಲೂಕು ಲೈಬ್ರೆರಿಯ ಸದಸ್ಯರಾದ ರಾಧಾಕೃಷ್ಣ ಬಳ್ಳಾಲ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲೈಬ್ರೆರಿ ಅಧ್ಯಕ್ಷ ಉದಯ ಕುಮಾರ್ ಟಿ.ಆರ್. ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಎಸ್. ನೇತೃತ್ವದ ಸಮಿತಿ ಅಧ್ಯಕ್ಷ ಸುರೇಶ್ ಮಾಸ್ತರ್ ಶುಭಾಶಂಸನೆಗೈದರು. ಗ್ರಂಥಾಲಯ ವÀತಿಯಿಂದ ನಡೆಸಿದ ರಸಪ್ರಶ್ನೆ ಚಿತ್ರಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ವಿಜಯಲಕ್ಷ್ಮಿ ಸ್ವಾಗತಿಸಿದರು. ಗ್ರಂಥಪಾಲಕಿ ಮೋಹಿನಿ ವಂದಿಸಿದರು. ಶಾಲಾ ಅಧ್ಯಾಪಿಕೆ ಜಯಲಕ್ಷ್ಮೀ ಟೀಚರ್ ಕಾರ್ಯಕ್ರಮ ನಿರೂಪಿಸಿದರು.


