HEALTH TIPS

ಕರುಣಾವರಣದಲ್ಲಿ ಕಲಾ ಅನಾವರಣ


     ಕುಂಬಳೆ: ವಿದ್ಯಾರ್ಥಿಗಳ ಚಿತ್ರಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿ ಕರುಣಾವರಣದಲ್ಲಿ ಕಲಾ ಅನಾವರಣವಾಯಿತು. ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಸಭಾಂಗಣದ ಕಟ್ಟಡದ ಭಿತ್ತಿಗಳಲ್ಲಿ ಶಾಲಾ ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಚಿಸಿದ ಚಿತ್ರಗಳನ್ನು ಗೋಡೆಗಳಲ್ಲಿ ಅಂಟಿಸಲಾಯಿತು. ಶಾಲೆಯ ಚಿತ್ರಕಲಾ ಅಧ್ಯಾಪಕ ರಾಜಕುಮಾರ್ ಕಾಟುಕುಕ್ಕೆ ಅವರ ನೇತೃತ್ವದಲ್ಲಿ ಕಲಾ ಅನಾವರಣ ನಡೆಯಿತು. ಶಾಲೆಯ ವಿದ್ಯಾರ್ಥಿಗಳು ಬಿಡಿಸಿದ ಆಯಿಲ್ ಪೈಂಟ್, ಕಲರ್ ಪೈಂಟ್, ಪೆನ್ಸಿಲ್‍ನಿಂದ ರಚಿಸಿದ ಚಿತ್ರಗಳು ಇದರಲ್ಲಿ ಒಳಗೊಂಡಿವೆ. ಶಾಲಾ ಮುಖ್ಯೋಪಾಧ್ಯಾಯ ಎನ್. ರಾಮಚಂದ್ರ ಭಟ್ ಅನಾವರಣಗೊಳಿಸಿ, ವಿದ್ಯಾರ್ಥಿಗಳ ಸೃಜನಶೀಲತೆಯು ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದರು. ಶಾಲಾ ಅಧ್ಯಾಪಕರಾದ ವಿದ್ಯಾಸರಸ್ವತಿ, ಈಶ್ವರಿ, ಸೌಮ್ಯ, ಪ್ರಶಾಂತ ಹೊಳ್ಳ ನೀರಾಳ, ಶಿವಪ್ರಸಾದ ಎಡಕ್ಕಾನ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries