ಮಧೂರು: ಮಧೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಇತ್ತೀಚೆಗೆ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಿವಾಕರ ಆಚಾರ್ಯ ಉದ್ಘಾಟಿಸಿ ರಕ್ಷಕ ಶಿಕ್ಷಕ ಸಂಘದ ಮಹತ್ವವನ್ನು ವಿವರಿಸಿದರು. ಮಾತೃಸಂಘದ ಅಧ್ಯಕ್ಷೆ ಪ್ರಸನ್ನಾ, ಉಪಾಧ್ಯಕ್ಷೆ ಅನಿತಾ, ನಿವೃತ್ತ ಅಧ್ಯಾಪಕ ರಾಘವ ಮಾಸ್ತರ್ ಮಾಯಿಪ್ಪಾಡಿ ಹಾಗೂ ಶಿಕ್ಷಕಿ ದೇವಕೀದೇವಿ ಶುಭ ಹಾರೈಸಿದರು. ಅಧ್ಯಾಪಿಕೆ ಲೀಲಾವತಿ ವಾರ್ಷಿಕ ವರದಿ ಮಂಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು. ಅಧ್ಯಾಪಿಕೆ ಬಾಲಾಮಣಿ ವಂದಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಲ್.ಎಸ್.ಎಸ್. ಸ್ಕಾಲರ್‍ಶಿಪ್‍ಗೆ ಅರ್ಹತೆ ಪಡೆದ ಜ್ಯೋತ್ಸ್ನ ಮತ್ತು ಪ್ರಥಮ ಕಿಶೋರ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.


