ಉಪ್ಪಳ: ಮಂಗಲ್ಪಾಡಿ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 2019-20 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಜರಗಿತು.
ಶಾಲಾ ಹಿರಿಯ ಶಿಕ್ಷಕಿ ಆಶಾಲತಾ ಕಳೆದ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ರಕ್ಷಕ-ಶಿಕ್ಷಕ ಸಂಘದ ಹಾಗೂ ಮಾತೃ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಹುಸೈನಾರ್ ಹಾಗೂ ಉಪಾಧ್ಯಕ್ಷರಾಗಿ ಹಸೈನಾರ್ ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಶೈಮಾ ಮತ್ತು ಉಪಾಧ್ಯಕ್ಷೆಯಾಗಿ ಜಾಹಿನ ಆಯ್ಕೆಯಾದರು. ಸಭೆಯಲ್ಲಿ ಎಸ್.ಎಂ.ಸಿ, ಮಾತೃ ಸಂಘದ ಸರ್ವ ಸದಸ್ಯರೂ, ಅಧ್ಯಾಪಕರಾದ ಚಂದ್ರಕಾಂತ, ಜೋಕಿ, ಸಿನಿ, ಸಫಾನ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಅಧ್ಯಾಪಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮರಿಯಮ್ಮ ಟೀಚರ್ ವಂದಿಸಿದರು.


