ಮಂಜೇಶ್ವರ: ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ಐ.ಜೆ.ಯು) ನ ಕೇರಳ ಘಟಕವಾದ ಕೇರಳ ಜರ್ನಲಿಸ್ಟ್ ಯೂನಿಯನ್ (ಕೆ.ಜೆ.ಯು) ನ ಅಧೀನದಲ್ಲಿರುವ ಮಂಜೇಶ್ವರ ಪ್ರೆಸ್ ಕ್ಲಬ್ ನ 2019-20 ನೇ ಸಾಲಿಗೆ ನೂತನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಹ್ಮಾನ್ ಉದ್ಯಾವರ, ಪ್ರಧಾನ ಕಾರ್ಯದರ್ಶಿಯಾಗಿ ಆರಿಫ್ ಮಚ್ಚಂಪ್ಪಾಡಿ. ಕೋಶಾಧಿಕಾರಿಯಾಗಿ ಸನಲ್ ಕುಮಾರ್, ಉಪಾಧ್ಯಕ್ಷರುಗಳಾಗಿ ರವೀಂದ್ರ ಪ್ರತಾಪ ನಗರ, ಅಬ್ದುಲ್ ರಹ್ಮಾನ್ ಪಾರಕಟ್ಟ, ಜೊತೆ ಕಾರ್ಯದರ್ಶಿಗಳಾಗಿ ರತನ್ ಕುಮಾರ್, ಸಲಾಂ ವರ್ಕಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನೀಸ್ ಉಪ್ಪಳ, ಹರ್ಷಾದ್ ವರ್ಕಾಡಿ, ಸಾಯಿಭದ್ರಾ. ರೈ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಹನೀಸ್ ಉಪ್ಪಳ ಉದ್ಘಾಟಿಸಿದರು. ಹರ್ಷಾದ್ ವರ್ಕಾಡಿ ಸ್ವಾಗತಿಸಿ, ಸಾಯಿಭದ್ರ ರೈ ವಂದಿಸಿದರು.


