ನವದೆಹಲಿ: ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವಾಗ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಸರ್ಕಾರದ ನಿರ್ಧಾರವನ್ನು ಆರ್ಥಿಕ ಸಮೀಕ್ಷೆ ಸೂಚಿಸುತ್ತದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಂಸತ್ತಿನ ಸದನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2018-19ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಇಂದು ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಸವಾಲುಗಳ ಬಗ್ಗೆ ವಿಸ್ತಾರವಾದ ಸ್ಪಷ್ಟ ಚಿತ್ರಣವನ್ನು ಆರ್ಥಿಕ ಸಮೀಕ್ಷೆ ಒದಗಿಸುತ್ತದೆ ಎಂದು ಕುಮಾರ್ ಹೇಳಿದರು.
ವಿಶೇಷವಾಗಿ ಖಾಸಗಿ ವಲಯದಿಂದ ಹೂಡಿಕೆಗಳನ್ನು ವೇಗಗೊಳಿಸಿ ಬೆಳವಣಿಗೆಗೆ ಸರಿಯಾದ ದಿಕ್ಕಿನಲ್ಲಿ ಒತ್ತು ನೀಡುವ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ.


