ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್ನಡೆಸುವ ಹತ್ತನೇ ತರಗತಿ, ಹೈಯರ್ ಸೆಕೆಂಡರಿ ತತ್ಸಮಾನ ತರಬೇತಿಗಳ ಈ ವರ್ಷದ ನೋಂದಣಿ ಆರಂಭಗೊಂಡಿದೆ.
ಈ ಸಂಬಂಧ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಇ.ಪದ್ಮಾವತಿ, ಪುಷ್ಪಾ ಅಮೆಕ್ಕಳ, ಪಿ.ವಿ.ಪದ್ಮಜಾ, ಮುಂತಾಝ್ ಝಮೀರ, ಕಾರ್ಯದರ್ಶಿ ಪಿ. ನಂದಕುಮಾರ್, ಹಣಕಾಸು ಅಧಿಕಾರಿ ಷಂನಾದ್, ಸಾಕ್ಷರತಾ ಮಿಷನ್ ಜಿಲ್ಲ ಸಂಚಾಲಕ ಷಾಜು ಜಾನ್, ಸಹಾಯಕ ಂಚಾಲಕ ಪಿ.ವಿ.ಶಾಸ್ತಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ನೋಡೆಲ್ ಪ್ರೇರಕ್ ಆಯಿಷಾ ಮಹಮ್ಮದ್ ತತ್ಸಮಾನ ನೋಂದಣಿ ಪಾರಂ ಪಡೆದುಕೊಂಡರು.

