HEALTH TIPS

`ಫೆÇ್ಲೀರೆನ್ಸ್ ನೈನ್ಟಿಂಗೇಲ್' ಪ್ರಶಸ್ತಿಗೆ ಜನಾರ್ಧನ ಆಸ್ಪತ್ರೆಯ ಶ್ರೀದೇವಿ ಆಯ್ಕೆ

     
      ಕಾಸರಗೋಡು: ಬೆಂಗಳೂರಿನ ಪ್ರತಿಷ್ಠಿತ `ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ' ಸಂಸ್ಥೆ ಪ್ರತಿವರ್ಷ ನೀಡುತ್ತಾ ಬಂದಿರುವ `ಫೆÇ್ಲೀರೆನ್ಸ್ ನೈನ್ಟಿಂಗೇಲ್' ರಾಷ್ಟ್ರೀಯ ಪ್ರಶಸ್ತಿಗೆ ಈ ಸಾರಿ ಕಾಸರಗೋಡಿನ ಜನಾರ್ಧನ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿರುವ ಶ್ರೀದೇವಿ ಅವರು ಆಯ್ಕೆಯಾಗಿದ್ದಾರೆ.
      ಜುಲೈ 27ರ ಶನಿವಾರ ಬೆಂಗಳೂರಿನ ಬಿ.ಎಂ.ಸಿ.ಆರ್.ಐ. ಆಡಿಟೋರಿಯಂನಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಶ್ರೀದೇವಿಯವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಇವರು ಕಾಸರಗೋಡಿನ ಸರ್ಕಾರಿ ಕಾಲೇಜಿನ ಹಳೆ ವಿದ್ಯಾರ್ಥಿನಿ. ಕೊಚ್ಚಿನ್‍ನ `ಕೊಚ್ಚಿನ್ ಸ್ಕೂಲ್ ಆಫ್ ಪೆಥಾಲಜಿ'ಯಲ್ಲಿ ಡಿಪೆÇ್ಲಮಾ ಮಾಡಿಕೊಂಡಿರುವ ಶ್ರೀದೇವಿ ಈ ಹಿಂದೆ ಕಾಸರಗೋಡಿನ ಕಿಮ್ಸ್ ನಲ್ಲೂ ಸೇವೆ ಸಲ್ಲಿಸಿದ್ದಾರೆ. ಇದೇ ಸಮಾರಂಭದಲ್ಲಿ `ಮದರ್ ತೆರೆಸಾ' ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಚಿತ್ರನಟ ಪುನೀತ್ ರಾಜಕುಮಾರ್ ಅವರು ಸ್ವೀಕರಿಸಲಿದ್ದಾರೆ. `ಪಾರ್ವತಮ್ಮ ರಾಜಕುಮಾರ್ ಟ್ರಸ್ಟ್'  ಸಲ್ಲಿಸುತ್ತಿರುವ ಸಾಮಾಜಿಕ ಸೇವೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries