HEALTH TIPS

10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ ಶಿಲ್ಪಾಶೆಟ್ಟಿ!

       
       ಮುಂಬೈ: ಬಾಲಿವುಡ್ ನಟಿ ಮಂಗಳೂರು ಮೂಲದ ಚೆಲುವೆ ಶಿಲ್ಪಾ ಶೆಟ್ಟಿ ಫಿಟ್‍ನೆಸ್ ಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಕಳೆದ 13 ವರ್ಷಗಳಿಂದ ಯೋಗ ಕುರಿತ ವೀಡಿಯೊ ಸಿದ್ದಪಡಿಸುವಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ.
     ಫಿಟ್ ನೆಸ್ ಗೆ ಸಂಬಂಧಿಸಿದ ಕಂಪನಿಯೊಂದು ಅವರಿಗೆ ಹೊಸ ಆಫರ್ ನೀಡಿದೆ. ಪ್ರಮುಖ ಆಯುರ್ವೇದ ಕಂಪನಿಯಾದ ಸ್ಲಿಮ್ಮಿಂಗ್ ಪಿಲ್ಸ್ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲು 10 ಕೋಟಿ ರೂ. ನೀಡುವುದಾಗಿ ಸದರಿ ಕಂಪನಿ ತಿಳಿಸಿದೆ.  ಆದರೆ, ಶಿಲ್ಪಾ ಶೆಟ್ಟಿ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ. ತಮಗೆ ನಂಬಿಕೆಯಿಲ್ಲದ ವಿಷಯಗಳನ್ನು ಜನರಿಗೆ ಹೇಳಲು ತಮ್ಮಿಂದ ಸಾಧ್ಯವಿಲ್ಲ ಎಂದು ಸದರಿ ಕಂಪನಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.
    ಸರಿಯಾದ ದೈಹಿಕ ಅಭ್ಯಾಸ, ಸೂಕ್ತ ಆಹಾರ ಸೇವಿಸಿದರೆ, ಫಿಟ್‍ನೆಸ್ ತಾನಾಗಿಯೇ ಬರುತ್ತದೆ. ಸಹಜ ಬೊಜ್ಜು ಕರಗಿ ಆರೋಗ್ಯವಂತರಾಗಿ ವಾಗಿ ಇರುತ್ತಾರೆ.  ಸ್ಲಿಮ್ಮಿಂಗ್ ಮಾತ್ರೆಗಳನ್ನು ಸೇವಿಸಿದರೆ ತೂಕ ಕಡಿಮೆಯಾಗಲಿದೆ ಎಂಬ ಸದರಿ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ತಮ್ಮ ಆತ್ಮಸಾಕ್ಷಿ ಅಡ್ಡಿಯಾಗುತ್ತಿದೆ. ಮನಸಾಕ್ಷಿ ಒಪ್ಪದ ಯಾವ ಕೆಲಸವನ್ನು ತಾವು ಎಂದೂ ಮಾಡುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
    ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಸ್ವಲ್ಪ ತಡವಾಗಿಯಾದರೂ ದೇಹದ ತೂಕ ಇಳಿಸಬಹುದಾಗಿದೆ. ಫಿಟ್ನೆಸ್ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳ ಕುರಿತು ಶಿಲ್ಪಾ ಶೆಟ್ಟಿ ಆಪ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ ಈ ಆಪ್ ಮೂಲಕ ಆಹಾರ ನಿಯಮ ಮತ್ತು ಫಿಟ್‍ನೆಸ್ ಕುರಿತು ಸಲಹೆ ಕೇಳಿ ಪಡೆಯಬಹುದಾಗಿದೆ. ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದ ನಂತರ ಚಿತ್ರರಂಗದಿಂದ ದೂರವಾಗಿದ್ದ, ಶಿಲ್ಪಾ ಶೆಟ್ಟಿ ದಶಕದ ನಂತರ ಇದೀಗ ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries