ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳ ಪರಿಸರದಲ್ಲಿ ಆ.23ರಂದು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್, ಮಹೇಶ್ವರೀ ಮಹಿಳಾ ಸಮಾಜ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 9ಕ್ಕೆ ದೇವಳದ ಪ್ರಧಾನ ಅರ್ಚಕ ವಿಷ್ಣುನಾವಡ ಬಜಕೂಡ್ಲು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ ಅಧ್ಯಕ್ಷತೆ ವಹಿಸುವರು.
ಬೆಳಿಗ್ಗೆ 9.30ರಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಲಿಂಬೆ ಚಮಚ ಓಟ, ಸೂಜಿ ನೂಲು ಓಟ, ಸಂಗೀತ ಕುರ್ಚಿ, ಬಟಾಟೆ ಹೆಕ್ಕುವ ಸ್ಪರ್ಧೆ, 10.30ರಿಂದ ಮಹಿಳೆಯರಿಗೆ ಸಂಗೀತ ಕುರ್ಚಿ, 10.45ರಿಂದ ಸಾರ್ವಜನಿಕರಿಗೆ ಮಡಕೆ ಒಡೆಯುವುದು, 11ರಿಂದ ಮಕ್ಕಳಿಗೆ ಭಕ್ತಿಗೀತೆ, 11.30ರಿಂದ ಸಾರ್ವಜನಿಕರಿಗೆ ಭಕ್ತಿಗೀತೆ, 11.45ರಿಂದ ಮಕ್ಕಳಿಗೆ ಸ್ಲೋ ಸೈಕಲ್ ರೇಸ್, ಸಾರ್ವಜನಿಕರಿಗೆ ಸ್ಲೋ ಬೈಕ್ ರೇಸ್ ,11.30ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪುರಾಣ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆ, 12ಕ್ಕೆ 5 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಲಿವೆ.
ಮಧ್ಯಾಹ್ನ 1ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಿಬಿಐ ಚೆನ್ನೈ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ, ಹರಿದಾಸ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಧಾರ್ಮಿಕ ಭಾಷಣ ಮಾಡಲಿದ್ದಾರೆ.
ಎಣ್ಮಕಜೆ ಗ್ರಾ.ಪಂ.ಸದಸ್ಯ ಉದಯ ಚೆಟ್ಟಿಯಾರ್ ಬಜಕೂಡ್ಲು, ಮಹಾಲಿಂಗೇಶ್ವರ ಸೇವಾ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಸಪರ್ಂಗಳ, ಕ್ಲಬ್ ಅಧ್ಯಕ್ಷ ದಾಮೋದರ ಬಜಕೂಡ್ಲು, ಉಪಾಧ್ಯಕ್ಷ ಪುರುಷೋತ್ತಮ ಬಿ.ಎಂ., ಕಾರ್ಯದರ್ಶಿ ಸುಜಿತ್ ರೈ ಬಜಕೂಡ್ಲು, ದೀಕ್ಷಿತ್ ಬಜಕೂಡ್ಲು, ಮಹಿಳಾ ಸಮಾಜ ಅಧ್ಯಕ್ಷೆ ಸುಶೀಲ ರೈ ಪರ್ಪಕರ್ಯ ಉಪಸ್ಥಿತರಿರುವರು.

