ನವದೆಹಲಿ: ಭಾರತೀಯ ಗ್ರಾಮಗಳು ಶೀಘ್ರವೇ ಕಾಗದರಹಿತವಾಗಲಿದೆ! ಹೌದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರ ಜ್ಞಾ ನ ಸಚಿವಾಲಯದ ಸಾಮಾನ್ಯ ಸೇವಾ ಕೇಂದ್ರ ಮತ್ತು ಪಂಚಾಯತಿ ರಾಜ್ ಸಚಿವಾಲಯವು ಭಾರತದ 2.5 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳ ಗ್ರಾಮ ಪಂಚಾಯತಿಗಳ ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಒಪ್ಪಂದ ಮಾಡಿಕೊಂಡ ಬಳಿಕ ಇದು ಜಾರಿಗೊಳ್ಳಲಿದೆ.
ಸಾಮಾನ್ಯ ಸೇವಾ ಕೇಂದ್ರ ಇ-ಆಡಳಿತ ಸೇವೆಗಳು ಒeiಣಙ ಅಡಿಯಲ್ಲಿ ವಿಶೇಷ ಉದ್ದೇಶದ ವಾಹನಗಳು (ಎಸ್‍ಪಿವಿ) ಪ್ರಾಥಮಿಕವಾಗಿ ಭಾರತದ ಗ್ರಾಮೀಣ ಕೇಂದ್ರಗಳಲ್ಲಿ ಇ-ಆಡಳಿತ ಸೇವೆಗಳ ಅಭಿವೃದ್ಧಿ ಮತ್ತು ಜಾರಿ ಯತ್ತ ಗಮನ ಹರಿಸುವ ಉದ್ದೇಶವನ್ನು ಹೊಂದಿದೆ.
ಒಪ್ಪಂದದ ಅಡಿಯಲ್ಲಿ ಎಸ್‍ಪಿವಿ ಪಂಚಾಯತಿ ರಾಜ್ ಸಚಿವಾಲಯದೊಂದಿಗೆ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು 'ಡಿಜಿಟಲ್ ಪಂಚಾಯತ್'ಗಳಾಗಿ ಪರಿವರ್ತಿಸಲು ಕೆಲಸ ಮಾಡುತ್ತದೆ, ದತ್ತಾಂಶ ಡಿಜಿಟಲೀಕರಣವನ್ನು ಕಾರ್ಯಗತಗೊಳಿಸಲು ಗ್ರಾಮ ಪಂಚಾಯಿತಿಗಳಿಗೆ ಬೆಂಬಲ ನೀಡುತ್ತದೆ ಮತ್ತು ಎಲ್ಲಾ ಪಂಚಾಯತ್ ಮಟ್ಟದ ಸೇವೆಗಳನ್ನು ತ್ವರಿತವಾಗಿ ತಲುಪಿಸುತ್ತದೆ. "ಈ ಒಪ್ಪಂದವು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಬಿಪಿಓಗಳನ್ನು ಉತ್ತೇಜಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಅದರಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ" ಎಂದು ಹೇಳಿದೆ.
ವಿವಿಧ ಸಮೀಕ್ಷೆಗಳನ್ನು ನಡೆಸುವಲ್ಲಿ ಗ್ರಾಮ ಪಂಚಾಯಿತಿಗಳನ್ನು ಬೆಂಬಲಿಸುವುದರ ಜೊತೆಗೆ ಸಿಎಸ್‍ಸಿಗಳು ಎಲ್ಲಾ ಗ್ರಾಮ ಪಂಚಾಯಿತಿಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವುದನ್ನು ಸಹ ಒಪ್ಪಂದವು ಖಚಿತಪಡಿಸುತ್ತದೆ. ಸಿಎಸ್ಸಿಗಳು ಗ್ರಾಮ ಪಂಚಾಯಿತಿಗಳ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಡಿಜಿಟಲ್ ಸಾಕ್ಷರತಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.
"ನಾವು ಗ್ರಾಮ ಪಂಚಾಯಿತಿಗಳಲ್ಲಿ ದಿನನಿತ್ಯದ ಕೆಲಸವನ್ನು ಸ್ವಯಂಚಾಲಿತಗೊಳಿಸುತ್ತೇವೆ ಮತ್ತು ಡಿಜಿಟಲೀಕರಣಗೊಳಿಸುತ್ತೇವೆ, ನಿಜವಾದ ಡಿಜಿಟಲ್ ಪಂಚಾಯತ್ ರಚಿಸಲು ಇ-ಪಂಚಾಯತ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೊಡಗಿಸಿಕೊಳ್ಳುತ್ತೇವೆ" ಎಂದು ಸಿಎಸ್ಸಿ ಎಸ್‍ಪಿವಿ ಸಿಇಒ ಡಾ.ದಿನೇಶ್ ತ್ಯಾಗಿ ಹೇಳಿದರು.


