ನವದೆಹಲಿ: ಡಿಸ್ಕವರಿ ಚಾನಲ್ ನ ಜನಪ್ರಿಯ ಶೋ ಮ್ಯಾನ್ ವರ್ಸಸ್ ವೈಲ್ಡ್ ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಸಂಚಿಕೆ ಹೊಸ ದಾಖಲೆಯನ್ನು ನಿರ್ಮಿಸಿದೆ.
ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಸಂಚಿಕೆ 3.69 ಮಿಲಿಯನ್ ಇಪ್ರೆಷನ್ ಗಳನ್ನು ಪಡೆದಿದ್ದು ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ಡಿಸ್ಕವರಿ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. ಬಿಎಆರ್ ಸಿ ಡಾಟಾವನ್ನು ಡಿಸ್ಕವರಿ ಉಲ್ಲೇಖಿಸಿದ್ದು, ಕಳೆದ ನಾಲ್ಕು ವಾರಗಳಲ್ಲಿ ಈ ಶೋ ನ್ನು ವೀಕ್ಷಿಸಿದವರ ಸಂಖ್ಯೆಗಿಂತ 15 ಪಟ್ಟು ಹೆಚ್ಚಿನ ವೀಕ್ಷಕರು ಪ್ರಧಾನಿ ಮೋದಿ ಅವರಿದ್ದ ಸಂಚಿಕೆಯನ್ನು ವೀಕ್ಷಿಸಿದ್ದಾರೆ ಎಂದು ಹೇಳಿದೆ.
ಪ್ರಧಾನಿ ಮೋದಿ ಅವರಿದ್ದ ಪ್ರೀಮಿಯರ್ ಸ್ಲಾಟ್ ನ ಸಂಚಿಕೆಯಿಂದ ಉಳಿದ ಇನ್ಫೋಟೈನ್ಮೆಂಟ್ ಚಾನಲ್ ಗಳ ಪೈಕಿ ಡಿಸ್ಕವರಿಗೆ ಶೇ.93 ರಷ್ಟು ಚಾನಲ್ ಷೇರು ದೊರೆತಿದೆ. ಪ್ರಧಾನಿ ಮೋದಿ ಅವರ ಸಂಚಿಕೆಯಿಂದ ದೊರೆತ ಯಶಸ್ಸಿಗೆ ಅತೀವ ಸಂತಸ ವ್ಯಕ್ತಪಡಿಸಿರುವ ಡಿಸ್ಕವರಿ, ಭಾರತದಲ್ಲಿ ಹುಲಿ ಸಂರಕ್ಷಣೆಗೆ ದೇಣಿಗೆ ನೀಡುವುದಾಗಿ ಘೋಷಿಸಿದೆ.


