ಬದಿಯಡ್ಕ: ರಾಷ್ಟ್ರದ ಹಿರಿಮೆ, ಗರಿಮೆಗಳನ್ನು ತಿಳಿದುಕೊಂಡಾಗ ಮಾತ್ರ ಇಂದಿನ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಲು ಸಾಧ್ಯ. ಬಾಲ್ಯದಲ್ಲಿ ಭಾರತೀಯ ಸಂಸ್ಕøತಿಯ ಅರಿವನ್ನು ಮೂಡಿಸುವ ಮಹತ್ತರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಕರ್ತವ್ಯ ಪ್ರತಿಯೊಬ್ಬನಿಗಿದೆ. ಮಕ್ಕಳಲ್ಲಿ ಸನಾತನ ಭಾರತೀಯ ಸಂಸ್ಕøತಿಯನ್ನು ಬಿತ್ತಿ ಅದು ಹೆಮ್ಮರವಾಗಿ ಬೆಳೆಯಬೇಕು. ರಾಷ್ಟ್ರದ ಆತ್ಮ ಅದರ ಅಸ್ಮಿತೆಯಾಗಿದೆ ಎಂದು ಬಾಲಗೋಕುಲ ಕಾರಡ್ಕ ಮಂಡಲ ಪ್ರಮುಖ್ ಚಂದ್ರಶೇಖರ ತಿಳಿಸಿದರು.
ಮವ್ವಾರು ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ನ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮವ್ವಾರು ಶ್ರೀಕೃಷ್ಣ ಭಜನ ಮಂದಿರದಲ್ಲಿ ಭಾನುವಾರ `ಶ್ರೀಕೃಷ್ಣಾಮೃತಂ' ಬಾಲಗೋಕುಲದ ಉದ್ಘಾಟನಾ ಸಮಾರಂಭದ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.
ಕಾರ್ಯಕರ್ತರ ಅವಿರತ ಶ್ರಮದಿಂದ ಇಂದು ಇಲ್ಲಿ ಅರಳಿದ ಹೊಸತೊಂದು ಹೂವಿನ ಪರಿಮಳವು ಊರೆಲ್ಲಾ ವ್ಯಾಪಿಸುವುದರೊಂದಿಗೆ ಸಂಸ್ಕøತಿ ಸಂಸ್ಕಾರ ಮನೆ ಬೆಳಗುವಂತಾಗಬೇಕು. ಸದಾ ಒಂದಲ್ಲೊಂದು ಚಟುವಟಿಕೆಗಳಿಂದ ತಮ್ಮ ಮಕ್ಕಳು ಬೆಳೆಯಬೇಕು ಎಂದು ಎಲ್ಲಾ ಹೆತ್ತವರಲ್ಲಿಯೂ ಇರುವುದು ಸಹಜ. ಅದರೊಂದಿಗೆ ಭಾರತೀಯ ಸಂಸ್ಕøತಿ, ಪರಂಪರೆಯ ಅರಿವನ್ನು ಮೂಡಿಸುವ ವಿದ್ಯಾಭ್ಯಾಸದಿಂದ ಮಗುವಿನ ಸರ್ವಾಂಗೀಣ ಬೆಳವಣಿಗೆಯಾಗಬೇಕು ಎಂದು ಅವರು ತಿಳಿಸಿದರು.
ಊರಿನ ಹಿರಿಯರಾದ ಶಂಕರ ಪೆರಿಂಜೆ ದೀಪಜ್ವಲನೆಗೈದು `ಶ್ರೀಕೃಷ್ಣಾಮೃತಂ' ಬಾಲಗೋಕುಲಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಅವರು ತಮ್ಮ 5 ಸೆಂಟ್ಸ್ ಸ್ಥಳವನ್ನು ದಾನವಾಗಿ ನೀಡುವುದಾಗಿ ತಿಳಿಸಿದರು.
ಶ್ರೀಕೃಷ್ಣ ಫ್ರೆಂಡ್ಸ್ನ ಅಧ್ಯಕ್ಷ ಮಹೇಶ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಮರಿಕ್ಕಾನ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರ ರೈ ಮಠದಮೂಲೆ, ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದ ಪ್ರಧಾನ ಅರ್ಚಕ ಸೀತಾರಾಮ ಭಟ್, ಗಂಗಾಧರ ಯಾದವ್ ತೆಕ್ಕೆಮೂಲೆ, ಬಾಲಗೋಕುಲದ ನಾರಾಯಣ ಮಾಸ್ತರ್ ಪಾಲ್ಗೊಂಡಿದ್ದರು. ರಾಜೇಂದ್ರ ಮವ್ವಾರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷಿತ್ ಕುಮಾರ್ ಸ್ವಾಗತಿಸಿ, ನೀತಾ ವಂದಿಸಿದರು. ಮೋಹನ ಬಾರಿಕ್ಕಾಡು ಬಾಲಗೋಕುಲದ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಿಕೊಟ್ಟರು. ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ನ 10ನೇ ವರ್ಷದ ಶ್ರೀಕೃಷ್ಣಾಷ್ಟಮಿ ಉತ್ಸವವು ಆ. 23 ರಂದು ಆಚರಿಸುವುದಾಗಿ ಪದಾಧಿಕಾರಿಗಳು ತಿಳಿಸಿದರು. ಮವ್ವಾರು ಶ್ರೀಕೃಷ್ಣ ಭಜನಾ ಮಂದಿರ ಪದಾಧಿಕಾರಿಗಳು, ಸ್ಥಳೀಯರು ಈ ಸಂದರ್ಭದಲ್ಲಿ ಸಹಕರಿಸಿದರು.


