ಕುಂಬಳೆ: ಭಾಷಾ ಅಲ್ಪ ಸಂಖ್ಯಾತ ಪ್ರದೇಶ ಕಾಸರಗೋಡು - ಮಂಜೇಶ್ವರ ತಾಲೂಕು ವ್ಯಾಪ್ತಿಯ ಕನ್ನಡ ಮಾಧ್ಯಮ ಅಂಗನವಾಡಿ ಅಧ್ಯಾಪಕಿಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ರಾಜಕೀಯೇತರ ಸಂಘಟನೆ ರೂಪೀಕರಿಸಲು ಆ.28 ರಂದು ಬೆಳಿಗ್ಗೆ 10.30 ಕ್ಕೆ ಕುಂಬಳೆಯ ಬದಿಯಡ್ಕ ರಸ್ತೆಯ ಅನ್ನಪೂರ್ಣ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ.
ಹೋರಾಟದ ಮೂಲಕ ಕನ್ನಡ ಕೈಪಿಡಿ ಇನ್ನಿತರ ಪುಸ್ತಕಗಳನ್ನು ಮುದ್ರಿಸಿ ತಿಂಗಳು ಕಳೆದರೂ ಇನ್ನೂ ಅದನ್ನು ವಿತರಿಸಲು ಹಿಂದೇಟು ಹಾಕುತ್ತಿರುವುದನ್ನು ಅಂಗನವಾಡಿ ಶಿಕ್ಷಕಿಯರ ಜಿಲ್ಲಾ ಸಂಘದ ಸಭೆಯಲ್ಲಿ ಖಂಡಿಸಿದ್ದು ಶೀಘ್ರದಲ್ಲಿಯೇ ಪುಸ್ತಕಗಳನ್ನು ವಿತರಿಸಬೇಕೆಂದು ಒತ್ತಾಯಿಸಿದೆ.
ಆ.28 ರಂದು ಜರಗಲಿರುವ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಂಗನವಾಡಿ ಅಧ್ಯಾಪಿಕೆಯರು ಹಾಗು ಸಹಾಯಕಿಯರು ಭಾಗವಹಿಸಬೇಕೆಂದು ಸಂಘಟನೆಯ ಮುಖಂಡರಾದ ಶೋಭಾ ಹಾಗು ಜಲಜಾಕ್ಷಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

