ಕುಂಬಳೆ: ಕಥಾ ಸಂಕೀರ್ತನಾ ಕ್ಷೇತ್ರದಲ್ಲಿ ಹೊಸ ದಿಶೆ ಸೃಷ್ಟಿಸಿ ನೂರಾರು ಯುವ ಕೀರ್ತನಕಾರರ ರೂಪಣೆಯಲ್ಲಿ ಮುಂಚೂಣಿಯಲ್ಲಿರುವ ಕುಂಬಳೆಯ ಕೀರ್ತನಾ ಕುಟೀರದ 11ನೇ ವರ್ಷದ ಹರಿಕೀರ್ತನಾ ಹಬ್ಬ ಹಾಗೂ ಹರಿಕೀರ್ತನಾ ಸಪ್ತಾಹ ಅ.14 ರಿಂದ 20ರ ವರೆಗೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರ ವಠಾರದ ಪುರಂದರ ವೇದಿಕೆಯಲ್ಲಿ ನಡೆಯಲಿದೆ.
ಸಪ್ತಾಹದ ಆರಂಭದ ದಿನವಾದ ಅ.14 ರಂದು ಸಂಜೆ ಕಾರ್ಯಕ್ರಮಗಳು ಚಾಲನೆಗೊಳ್ಳಲಿದ್ದು, ಕಣಿಪುರ ಶ್ರೀಕ್ಷೇತ್ರದ ಅರ್ಚಕ ಕೆ.ಜಯರಾಮ ಅಡಿಗ ದೀಪ ಬೆಳಗಿಸಿ ಉದ್ಘಾಟಿಸುವರು. ಹರಿದಾಸ, ದಾಸ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ ಅಧ್ಯಕ್ಷತೆ ವಹಿಸುವರು. ಹರಿಕಥಾ ಪರಿಷತ್ ಉಪಾಧ್ಯಕ್ಷ, ಧಾರ್ಮಿಕ ಮುಖಂಡ ಶ್ರೀನಿವಾಸ ಭಟ್ ಕಣ್ವತೀರ್ಥ, ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ ಬಾಡೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ಕೀರ್ತನ ಕುಟೀರದ ವಿದ್ಯಾರ್ಥಿಗಳಾದ ಸ್ಕಂದಪ್ರಸಾದ್ ಹಾಗೂ ಚೈತ್ರ ಅವರಿಂದ ಕಥಾ ಸಂಕೀರ್ತನೆ, ಹುಬ್ಬಳ್ಳಿಯ ನಾಗರತ್ನ ವಿನಾಯಕ ಜೋಶಿ ಅವರಿಂದ ವಿಶೇಷ ಕಥಾ ಸಂಕೀರ್ತನೆ ಪ್ರಸ್ತುತಿಗೊಳ್ಳಲಿದೆ.
ಅ.15 ರಂದು ಸಂಜೆ 4 ರಿಂದ 6.30ರ ವರೆಗೆ ವಿದ್ಯಾರ್ಥಿಗಳಾದ ಅಕ್ಷಯ ಶೆಣೈ, ಧ್ಯೇಯಶ್ರೀ, ಜಯಪ್ರಸಾದ್, ದೇವಾಂಶು, ಮೃದುಲ ಹಾಗೂ ಗಾಯತ್ರಿ ಅವರ ರಂಗಪ್ರವೇಶ ನಡೆಯಲಿದೆ. ಸಂಜೆ 6.30 ರಿಂದ 8ರ ವರೆಗೆ ಕೆ.ಮಹಾಬಲ ಶೆಟ್ಟಿ ಕೂಟ್ಲು ಅವರಿಂದ ಶಂತನು ಮಹಾರಾಜ ಆಖ್ಯಾಯಿಕೆಯ ಸಂಕೀರ್ತನೆ ನಡೆಯಲಿದೆ. 16 ರಂದು ಸಂಜೆ 4ರಿಂದ 5.30ರ ವರೆಗೆ ವಿದ್ಯಾರ್ಥಿಗಳಾದ ವೇದಾಂಶು, ಬೇಬಿ ಲಿಖಿತ, ಚೈತನ್ಯ, ಅರುಣ, ಸುಸ್ರೀತ ಅವರಿಂದ ರಂಗಪ್ರವೇಶ ನಡೆಯಲಿದೆ. ಬಳಿಕ 6.30 ರಿಂದ 8ರ ವರೆಗೆ ಶ್ರೀಶವಿಠಲದಾಸ ಚೆನ್ನರಾಯಪಟ್ಟಣ ಅವರಿಂದ ಬಲಿ-ವಾಮನ ಕಥಾ ಸಂಕೀರ್ತನೆ ನಡೆಯಲಿದೆ. 17 ರಂದು ಸಂಜೆ 4 ರಿಂದ 5.30ರ ವರೆಗೆ ಶ್ರೀರಕ್ಷ, ಸಾತ್ವಿಕ್ ಕೃಷ್ಣ, ಭಾವನಾ ನಾಯಕ್ ಅವರ ರಂಗ ಪ್ರವೇಶ ಹಾಗೂ 5.30 ರಿಂದ 6.30 ರಿಂದ ಶಾಂಭವಿ ಅವರಿಂದ ಕಥಾ ಸಂಕೀರ್ತನೆ ಸತ್ಯಹರಿಶ್ಚಂದ್ರ ಮತ್ತು 6.3 ರಿಂದ 8ರ ವರೆಗೆ ಮೈಸೂರಿನ ಡಾ.ಪಿ.ಭಾನುಮತಿ ನರಸಿಂಹ ಸ್ವಾಮಿ ಅವರಿಂದ ಭದ್ರಬಾಹು ಮೋಕ್ಷ ಕಥಾ ಸಂಕೀರ್ತನೆ ನಡೆಯಲಿದೆ. ಅ.18 ರಂದು ಸಂಜೆ 4 ರಿಂದ 5.30ರ ವರೆಗೆ ಅಭಿಜ್ಞಾ ಭಟ್ ಬೊಳುಂಬು ಹಾಗೂ ನಿಶಾ ಅವರಿಂದ ರಂಗಪ್ರವೇಶ, ವೈಭವಿ ಅವರಿಂದ ನೈಷಧ ಸಾರ್ವಭೌಮ ಕಥಾ ಸಂಕೀರ್ತನೆ ಮತ್ತು ಡಾ.ಶ್ರೀಧರ ದಾಸಜೀ ಕುಂಭಾಶಿ ಅವರಿಂದ ಗಣೇಶ ಮಹಿಮೆ ಕಥಾ ಸಂಕೀರ್ತನೆ ನಡೆಯಲಿದೆ. ಅ.19 ರಂದು ಸಂಜೆ 4 ರಿಂದ 6.30ರ ವರೆಗೆ ಸುಶ್ಮಿತಾ, ಸುಮುಖ, ಕೃತ್ತಿಕ ಅವರಿಂದ ರಂಗಪ್ರವೇಶ, ವಿಜಯಲಕ್ಷ್ಮೀ ಅವರಿಂದ ಸಂಕೀರ್ತನೆ ಹಾಗೂ 6.30 ರಿಂದ 8ರ ವರೆಗೆ ಅನಂತಪದ್ಮನಾಭ ಭಟ್ ಕಾರ್ಕಳ ಅವರಿಂದ ಶ್ರೀಶನೈಶ್ಚರ ಮಹಾತ್ಮ್ಯೆ ಕಥಾ ಸಂಕೀರ್ತನೆ ನಡೆಯಲಿದೆ.
ಅ. 20 ರಂದು ಭಾನುವಾರ ಸಪ್ತಾಹದ ಸಮಾರೋಪದ ಅಂಗವಾಗಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30ರ ವರೆಗೆ ವಿದ್ಯಾರ್ಥಿಗಳಾದ ಅಭಿಷೇಕ್, ಅನುಜ್ಞಾ, ಶರಣ್ಯ, ಶ್ರುತಿ, ಶ್ರೀಲಕ್ಷ್ಮೀ, ಸರೋಜಿನಿ, ಪೂಜಾ, ಮೇಧಾ ಭಟ್ ಅವರಿಂದ ಕಥಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ದೇವಾಲಯದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ವಿರಾಮದ ಬಳಿಕ 2ರಿಂದ 3.30ರ ವರೆಗೆ ವಿದ್ಯಾರ್ಥಿಗಳಾದ ಕಿರಣ, ಶ್ರಾವಣ್ಯ, ನಿಶ್ಚಿತ ಅವರಿಂದ ಸಂಕೀರ್ತನೆ ನಡೆಯಲಿದೆ. 3.30 ರಿಂದ 6ರ ವರೆಗೆ ನಡೆಯಲಿರುವ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಕೀರ್ತನ ಕಸ್ತೂರಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ 6 ರಿಂದ 8ರ ವರೆಗೆ ಕೀರ್ತನ ಕುಟೀರದ ನಿರ್ದೇಶಕ, ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರಿಂದ ಸುಧಾಮ-ಶ್ಯಾಮ ವಿಶೇಷ ಹರಿಕಥಾ ಸಂಕೀರ್ತನೆ ನಡೆಯಲಿದೆ. ರಾತ್ರಿ 8ಕ್ಕೆ ಸಪ್ತಾಹದ ಮಂಗಳಾಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ.


