ಕಾಸರಗೋಡು: ಬಟ್ಟೆಕಲ್ಲಿನ ಶ್ರೀ ಕಲ್ಲುರ್ಟಿ ಕಲ್ಕುಡ ಸನ್ನಿಧಿಯ ಜೀರ್ಣೋದ್ಧಾರದಂಗವಾಗಿ ಸೆ.16 ರಂದು ಬೆಳಗ್ಗೆ 6.30 ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಕರ್ಕುಲ ಬೂಡು ಶಂಕರನಾರಾಯಣ ಕಡಮಣ್ಣಾಯ ಅವರು ಆಗಮಿಸಲಿದ್ದಾರೆ. ಬಳಿಕ ತಂತ್ರಿವರ್ಯರಿಂದ ಸ್ಥಳ ಶುದ್ಧಿ ಹಾಗು ಭೂಮಿ ಪೂಜೆ, ಬಳಿಕ 6.30 ರಿಂದ 8.30 ರ ಶುಭಮುಹೂರ್ತದಲ್ಲಿ ದೈವಸ್ಥಾನದ ಕುಟ್ಟಿ ಹೊಡೆಯುವ ಕಾರ್ಯಕ್ರಮ ನಡೆಯಲಿದೆ.
ಇದೇ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ, ಪರವೂರ ಭಕ್ತಾದಿಗಳು ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

