HEALTH TIPS

ಎನ್ ಡಿಎ-2: 100 ದಿನದ ಆಡಳಿತ ಬಹುದೊಡ್ಡ ಬದಲಾವಣೆ ಎಂದ ಪ್ರಧಾನಿ ಮೋದಿ

       
      ನವದೆಹಲಿ: ಬಿಜೆಪಿ ನೇತೃತ್ವದ ಎನ್?ಡಿಎ-2 ಅಧಿಕಾರಕ್ಕೆ ಬಂದು ಭಾನುವಾರಕ್ಕೆ ನೂರು ದಿನ ಪೂರೈಸಿದ್ದು, ಮೊದಲ ನೂರು ದಿನದ ಆಡಳಿತ ಬಹುದೊಡ್ಡ ಬದಲಾವಣೆ, ಅಭಿವೃದ್ಧಿ ಮತ್ತು ವಿಶ್ವಾಸ ಮೂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
     ಸದ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಹರಿಯಾಣದ ರೋಹ್ಟಕ್ ನಲ್ಲಿ ವಿಜಯ್ ಸಂಕಲ್ಪ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಬಾರಿ ಜನರು ನಮಗೆ ಅಗಾಧವಾದ ಬೆಂಬಲವನ್ನು ನೀಡಿ ಮತ್ತೆ ಅಧಿಕಾರ ನೀಡಿದ್ದಾರೆ. 100 ದಿನಗಳಲ್ಲಿ ನಾವು ಏನೇ ಮಾಡಿದ್ದರು ಅಥವಾ ಏನೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಅದು ಜನರ ಮೇಲೆ ನಂಬಿಕೆ ಇಟ್ಟು ಹಾಗೂ ಅವರ ಬೆಂಬಲದೊಂದಿಗೆ ಮಾಡಿದ್ದೇವೆ. ನಮ್ಮ ನಿರ್ಧಾರಗಳ ಹಿಂದೆ ದೇಶದ 130 ಕೋಟಿ ಜನರ ಸ್ಫೂರ್ತಿ ಇದೆ ಎಂದು ಎಂದಿದ್ದಾರೆ.
    ಕಳೆದ ವರ್ಷದಂತೆಯೇ ಈ ಬಾರಿಯೂ ಮುಂದಿನ ಎರಡು ದಿನಗಳಲ್ಲಿ ತಮ್ಮ ಸಂಪುಟದ ಸಚಿವರು ತಮ್ಮ ಸಚಿವಾಲಯದ ಸಾಧನೆಗಳನ್ನು ಜನರ ಮುಂದಿಡಲಿದ್ದಾರೆ ಎಂದು ಪ್ರಧಾನಿ ತಿಳಿಸಿದರು.
    ಈ ವರ್ಷ ಸಾಕಷ್ಟು ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾದವು. ಕಳೆದ 60 ವರ್ಷಗಳ ಸಂಸತ್ತಿನ ಕಲಾಪದಲ್ಲಿ ನಡೆಯದ ಸಾಕಷ್ಟು ಕೆಲಸಗಳು ಈ ಬಾರಿ ನಡೆದವು ಎಂದು ಮೋದಿ ತಮ್ಮ ಸಾಧನೆಯನ್ನು ಬಣ್ಣಿಸಿದರು.
   ತ್ರಿವಳಿ ತಲಾಕ್ ಅನ್ನು ಅಪರಾಧ ಎಂದು ಪರಿಗಣಿಸಿದ್ದು, ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮತ್ತು ಹೊಸ ಮೊಟಾರು ಕಾಯ್ದೆಯನ್ನು ತಿದುಪಡಿ ಮಾಡಲಾಯಿತು. ಇದರೊಂದಿಗೆ ಮಹತ್ವದ ನಿರ್ಣಯವಾದ ಸಂವಿಧಾನದ ಆರ್ಟಿಕಲ್? 370 ಮತ್ತು 35(ಎ) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್? ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ನಿರ್ಣಯವನ್ನು ತೆಗದುಕೊಳ್ಳಲಾಯಿತು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries