ಕಾಸರಗೋಡು: ಕುಷ್ಠ ರೋಗ ನಿಯಂತ್ರಣ ಕಾರ್ಯಕ್ರಮ ಅಶ್ವಮೇಧಂನ ದ್ವಿತೀಯ ಹಂತದ ಚಟುವಟಿಕೆಗಳು ಸೆ.23ರಿಂದ ಅ.6 ವರಗೆ ಜಿಲ್ಲೆಯಲ್ಲಿ ನಡೆಯಲಿದೆ.
ರಾಜ್ಯ ಸರಕಾರ ನಡೆಸುವ ತೀವ್ರ ಯ ಜ್ಞ ಕಾರ್ಯಕ್ರಮವೇ "ಅಶ್ವಮೇಧಂ". 2018 ಡಿಸೆಂಬರ್ ತಿಂಗಳಲ್ಲಿ ಮೊದಲ ಹಂತದ ಚಟುವಟಿಕೆಗಳು ನಡೆದಿದ್ದುವು. ಈ ವೇಳೆ 8 ಹೊಸ ರೋಗಿಗಳ ಪತ್ತೆಯಾಗಿದ್ದು, ಚಿಕಿತ್ಸೆ ಆರಂಭಿಸಲೂ ಸಾಧ್ಯವಾಗಿತ್ತು.
ದ್ವಿತೀಯ ಹಂತದ ಅಂಗವಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ಈ ಚಟುವಟಿಕೆ ನಡೆಯಲಿವೆ. ತರಬೇತಿ ಲಭಿಸಿದ ಒಬ್ಬ ಸ್ವಯಂಸೇವಕಿ ಸಹಿತದ ತಂಡ ಮನೆ ಮನೆ ಸಂದರ್ಶನ ನಡೆಸಿ ಕುಷ್ಠರೋಗ ತಪಾಸಣೆ ಮಾಡಲಿದೆ. ಇವರ ಮೇಲ್ವಿಚಾರಣೆಗೆ ಮತ್ತು ಸಮಗ್ರ ತಪಾಸಣೆ ಅಗತ್ಯವಿದ್ದಲ್ಲಿ ನಡೆಸಲು ಹೆಲ್ತ್ ಇನ್ಸ್ ಪೆಕ್ಟರ್ ರು ಮತ್ತು ಪಬ್ಲಿಕ್ ಹೆಲ್ತ್ ನರ್ಸ್ ಗಳು ಇರುವರು. ಜನಜಾಗೃತಿ ಕಾರ್ಯಕ್ರಮವೂ ಇರುವುದು. ಈ ಕಾರ್ಯಕ್ರಮ ಯಶಸ್ಸಿಗೆ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ವಿನಂತಿಸಿರುವರು.

