ಪೆರ್ಲ:ನಲ್ಕ ಶುಳುವಾಲಮೂಲೆ ಶ್ರೀಸದನದಲ್ಲಿ ಸೆ.29ರಿಂದ ಶರನ್ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಸೆ.29ರಂದು ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ ಪೂಜೆ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರ ನಾಮ ಕುಂಕುಮಾರ್ಚನೆ, ರಾತ್ರಿ 8ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅ.1ರಂದು ಸಂಜೆ 7ರಿಂದ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯ ಕಾರ್ತಿಕಶ್ಯಾಮ ಇವರಿಂದ ಶಾಸ್ತ್ರೀಯ ಸಂಗೀತ, 2ರಂದು ಸಂಜೆ 5ರಿಂದ ಕಾಸರಗೋಡು ಶ್ರೀರಂಗ ಜಂಗಮ ಟ್ರಸ್ಟ್ ಇವರಿಂದ ವಿಶೇಷ ತಾಳಮದ್ದಳೆ, 4ರಂದು ಸಂಜೆ 5.30ರಿಂದ ಶ್ರದ್ಧಾ ನಾಯರ್ ಕಾಟಿಪಳ್ಳ ಇವರಿಂದ ಹರಿಕಥಾ ಸಂಕೀರ್ತನೆ, ರಾತ್ರಿ 8ರಿಂದ ಜಾನಪದ ಪ್ರಶಸ್ತಿ ವಿಜೇತ ನಾಟ್ಯಗುರು ಜಯರಾಮ ಪಾಟಾಳಿ ನಿರ್ದೇಶನದಲ್ಲಿ 'ಮಹಿಷ ಮರ್ದಿನಿ' ಯಕ್ಷಗಾನ ಬಯಲಾಟ, 5ರಂದು ರಾತ್ರಿ 8ರಿಂದ ಪೆರ್ಲ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ವಿದ್ಯಾರ್ಥಿ ದ.ಕ.ಜಿಲ್ಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಶಿಷ್ಯ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಇವರಿಂದ 'ಸುದರ್ಶನ ವಿಜಯ' ಏಕವ್ಯಕ್ತಿ ಯಕ್ಷಗಾನ, 7ರಂದು ಬೆಳಗ್ಗೆ 8ರಿಂದ ಚಂಡಿಕಾ ಹವನ ಪ್ರಾರಂಭ, 11.30ಕ್ಕೆ ಪೂರ್ಣಾಹುತಿ, ಬೆಳಿಗ್ಗೆ 10ರಿಂದ ಬೆದ್ರಂಪಳ್ಳ ಶ್ರೀ ಗಣೇಶ ಭಜನಾ ಮಂಡಳಿ ಸದಸ್ಯರ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5ರಿಂದ ವಿಟ್ಲ ಯಕ್ಷ ಸಿಂಧೂರ ಪ್ರತಿಷ್ಠಾನ ಇವರಿಂದ 'ಶಾಂಭವೀ ವಿಲಾಸ' ಯಕ್ಷಗಾನ ತಾಳಮದ್ದಳೆ, ರಾತ್ರಿ 9.30ರಿಂದ ಮಂಗಳಾರತಿ, ಅಷ್ಟಾವಧಾನ ಸೇವೆ- ಪ್ರಸಾದ ವಿತರಣೆ, 8ರಂದು ವಿಜಯ ದಶಮಿ ಉತ್ಸವ ಜರುಗಲಿದೆ. ಎಲ್ಲಾ ದಿನಗಳಲ್ಲೂ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯಲಿದೆ ಎಂದು ಶ್ರೀಸದನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


