ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಮಡ್ವ ವ್ಯಾಪ್ತಿಗೊಳಪಟ್ಟ ಕಳತ್ತೂರು ಚೆಕ್‍ಪೋಸ್ಟ್ ನ ಗ್ರಾ.ಪಂ.ಅಧೀನದ ನಿವೇಶನಗಳಲ್ಲಿ ವಾಸಿಸುತ್ತಿರುವ 32 ಕುಟುಂಬಗಳಿಗೆ ಇತ್ತೀಚೆಗೆ ಸ್ಥಿರ ವಾಸ್ತವ್ಯ ಪ್ರಮಾಣಪತ್ರ ವಿತರಣೆ ನಡೆಯಿತು.
ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಪ್ರಮಾಣ ಪತ್ರ ವಿತರಿಸಿದರು. ಕಳೆದ 12 ವರ್ಷಗಳಿಂದ ಇಲ್ಲಿಯ ನಿವೇಶನಗಳಲ್ಲಿ ವಾಸಿಸುತ್ತಿರುವವರಿಗೆ ಇದರಿಂದ ಸ್ವಂತ ನಿವೇಶನ ಪಡೆದು ಕೃತಾರ್ಥತೆಗೆ ಕಾರಣವಾಯಿತು. ಪಡಿತರ ಚೀಟಿ, ವಿದ್ಯುತ್, ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯಗಳಿಗೆ ಪ್ರಮಾಣ ಪತ್ರ ಉಪಯೋಗವಾಗಲಿದೆ.
ಕುಂಬಳೆ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀಓ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಫಾತಿಮಾ ಅಬ್ದುಲ್ಲ ಕುಂಞÂ, ಅರುಣ ಆಳ್ವ, ಸುಕೇಶ್ ಭಂಡಾರಿ, ರಮೇಶ್ ಭಟ್, ಮಂಜುನಾಥ ಆಳ್ವ ಮಡ್ವ ಉಪಸ್ಥಿತರಿದ್ದು ಶುಭಹಾರೈಸಿದರು. ಗ್ರಾ.ಪಂ.ಸಹ ಕಾರ್ಯದರ್ಶಿ ಶೈನ್ ಕುಮಾರ್ ಸ್ವಾಗತಿಸಿ, ನೌಕರ ಸಂತೋಷ್ ವಂದಿಸಿದರು.


