HEALTH TIPS

ಕೆಲವರನ್ನು ಬಿಟ್ಟು, ಇಡೀ ಕಾಶ್ಮೀರ ವಿಧಿ 370ರ ರದ್ದತಿ ಪರವಾಗಿದೆ: ಅಜಿತ್ ದೋವಲ್

      ನವದೆಹಲಿ: ವಿಧಿ 370ರ ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಗೆ ಪಾಕಿಸ್ತಾನದ ನಿರಂತರವಾಗಿ ಯತ್ನಸುತ್ತಿದ್ದು, ನಮ್ಮ ಸೈನಿಕರ ಹೋರಾಟವೇನಿದ್ದರೂ ಉಗ್ರರ ವಿರುದ್ಧ ಮಾತ್ರ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
     ಪಾಕಿಸ್ತಾನ ಕಾಶ್ಮೀರದಲ್ಲಿ ಭಾರತೀಯ ಸೈನಿಕರು ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಆದರೆ ನಮ್ಮ ಸೈನಿಕರು ಉಗ್ರರ ವಿರುದ್ಧ ಮಾತ್ರ ಹೋರಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಆರೋಪವನ್ನು ನಿರಾಕರಿಸಿದ್ದಾರೆ.
    ಸ್ವಹಿತಾಸಕ್ತಿಗಾಗಿ ವಿಧಿ 370ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವರನ್ನು ಹೊರತು ಪಡಿಸಿ, ಇಡೀ ಕಾಶ್ಮೀರ ವಿಧಿ 370ರ ರದ್ದತಿ ಪರವಾಗಿದೆ. ವಿಧಿ 370ರಿಂದಾಗಿ ಸಂವಿಧಾನದ ಹಲವು ಹಕ್ಕಗಳಿಂದ ಕಾಶ್ಮೀರಿಗರು ವಂಚಿತರಾಗಿದ್ದರು. ಇದೀಗ ಆ ತಾರತಮ್ಯವನ್ನು ಮೋದಿ ಸರ್ಕಾರ ನಿಪಾರಣೆ ಮಾಡಿದೆ ಎಂದು ದೋವಲ್ ಹೇಳಿದರು.
    'ಈ ಪ್ರದೇಶದಲ್ಲಿರುವ ಸೇನಾ ಯೋಧರು ಭಯೋತ್ಪಾದಕರ ವಿರುದ್ಧ ಮಾತ್ರ ಹೋರಾಡುತ್ತಿದ್ದಾರೆ. ಜಮ್ಮು-ಕಾಶ್ಮೀರದ ಪೊಲೀಸರು ಮತ್ತು ಅರೆಸೇನಾಪಡೆ ಕಣಿವೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಕಣಿವೆ ರಾಜ್ಯದಲ್ಲಿ ಸೇನಾಪಡೆ ಅಮಾನವೀಯ ಕೃತ್ಯ ಎಸಗುತ್ತಿದೆ ಎಂಬ ಪ್ರಶ್ನೆಯೇ ಅಸಂಬದ್ಧ. ಸೇನೆ ಕೇವಲ ಉಗ್ರರ ವಿರುದ್ಧ ಹೋರಾಡುತ್ತಿದೆ ಅಷ್ಟೇ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಿರುವುದನ್ನು ಜಮ್ಮು-ಕಾಶ್ಮೀರದ ಬಹುಮತದಲ್ಲಿ ಬೆಂಬಲಿಸಿದ್ದಾರೆ ಎಂದರು.
      ಇದೇ ವೇಳೆ ಕಾಶ್ಮೀರದಲ್ಲಿ ಹೇರಲಾಗಿರುವ ನಿಬರ್ಂಧಗಳ ಕುರಿತು ಮಾತನಾಡಿದ ದೋವಲ್ ಅವರು, ಕಣಿವೆ ರಾಜ್ಯದ ಒಟ್ಟು 199 ಪೊಲೀಸ್ ಠಾಣೆಗಳ ಪೈಕಿ ಕೇವಲ 10 ಠಾಣೆಗಳ ವ್ಯಾಪ್ತಿಯಲ್ಲಿ ನಿಬರ್ಂಧ ಹೇರಲಾಗಿದೆ. ಅದೂ ಕೂಡ ಮುಂಜಾಗ್ರತಾ ಕ್ರಮವಾಗಿ ಅಷ್ಟೇ. ಪರಿಸ್ಥಿತಿ ಶಾಂತವಾದರೆ ಅದನ್ನು ಹಿಂಪಡೆಯುತ್ತೇವೆ ಎಂದು ದೋವಲ್ ಪಾಕ್ ಗೆ ತಿರುಗೇಟು ನೀಡಿದ್ದಾರೆ.
     ಗಡಿ ಭಾಗದ 20 ಕಿಲೋ ಮೀಟರ್ ದೂರದಲ್ಲಿರುವ ಪಾಕಿಸ್ತಾನದ ಕಮ್ಯೂನಿಕೇಶನ್ ಟವರ್ಸ್ ನಿಂದ, ಸಂದೇಶಗಳನ್ನು ರವಾನಿಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕಣಿವೆಯಲ್ಲಿ 230 ಉಗ್ರರು ಕಾಣಿಸಿಕೊಂಡಿದ್ದು, ಈ ಪೈಕಿ ಹಲವರನ್ನು ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ. ಮತ್ತೆ ಕೆಲವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ದೋವಲ್ ಈ ಸಂದರ್ಭದಲ್ಲಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು. 'ನಾವು ಪಾಕಿಸ್ತಾನದ ಕಳ್ಳಾಟಿಕೆಯ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದೇವೆ, ಎಷ್ಟೊಂದು ಆಪಲ್ ತುಂಬಿದ ಲಾರಿಗಳು ಸಂಚರಿಸುತ್ತಿವೆ..ಯಾಕೆ ನೀವು ಅದನ್ನು ತಡೆಯುತ್ತಿಲ್ಲ? ನಾವು ನಿಮಗೆ ಬಳೆಗಳನ್ನು ಕಳುಹಿಸುತ್ತೇವೆ ಎಂಬುದಾಗಿ ತಮ್ಮ ವ್ಯಕ್ತಿಯೊಬ್ಬನಿಗೆ ಹೇಳುತ್ತಿರುವುದನ್ನು ದೋವಲ್ ಉಲ್ಲೇಖಿಸಿದ್ದಾರೆ.
      ಕಣಿವೆ ರಾಜ್ಯದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಕಾಶ್ಮೀರದ ಜನರು ಬೆಂಬಲಿಸಿದ್ದಾರೆ. ಅವರೀಗ ಭವಿಷ್ಯದಲ್ಲಿನ ದೊಡ್ಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲಿ ಉದ್ಯೋಗ, ಆರ್ಥಿಕ ಅಭಿವೃದ್ಧಿಯೂ ಸೇರಿದೆ. ಕೇವಲ ಕೆಲವೇ ಕೆಲವು ಜನರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ ಎಂದು ದೋವಲ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries