ಮಂಜೇಶ್ವರ: ಮಂಜೇಶ್ವರ ಗುಡ್ಡೆಕೇರಿಯ ಪುರೋಹಿತ ಮನೆತನದವರಾದ ಗಿರಿಧರ ಭಟ್-ಲಕ್ಷ್ಮೀ ದಂಪತಿಗಳ ಮನೆಯಲ್ಲಿ ಪೂಜಿಸಲ್ಪಟ್ಟ ಮಹಾಗಣಪತಿ ವಿಗ್ರಹ. ಪರಂಪರಾಗತವಾಗಿ ಆಚರಿಸಿಕೊಂಡು ಬರುತ್ತಿರುವ ಶ್ರೀಗಣೇಶ ವಿಗ್ರಹ ಪ್ರತಿಷ್ಠೆ, ಪೂಜೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ವಿಗ್ರಹ ಪ್ರತಿಷ್ಠೆ, ಪೂಜೆ,ಮಧ್ಯಾಹ್ನ ಪೂಜೆ, ರಾತ್ರಿ ಭಜನೆ, ಪೂಜೆ, ಪ್ರಸಾದ ವಿತರಣೆ, ಭೋಜನ, ಮಂಗಳವಾರ ಬೆಳಿಗ್ಗೆ ಪೂಜೆ,ಮಧ್ಯಾಹ್ನ ಪೂಜೆ, ಸಂಜೆ ಭಜನೆ, ರಾತ್ರಿ ಪೂಜೆ, ಮಹಾಗಣಪತಿ ವಿಗ್ರಹ ವಿಸರ್ಜನೆ ನೆರವೇರಿತು.


